ಮೊಗ್ಗಾಗುವ ಆಸೆ
ತನ್ನ ಬುಡದಲ್ಲಿ
ನಲಿ ನಲಿದು
ಬೆಳೆಯುತಿರುವ
ಮೊಗ್ಗಾಗುವ ಆಸೆ!
ಕಾರ್ಮೋಡ ಮುಚ್ಚಿದ
ಭಾನಂಗಳವ ಪಕ್ಕನೆ ಬೆಳಗುವ
ಕೋಲ್ಮಿಂಚನು
ಇನ್ನೂ ಉದ್ದಕ್ಕೆ ಕತ್ತೆತ್ತಿ ನೋಡುವ
ಆತುರತೆಯಿಲ್ಲ!
ಬುಡ ಸಹಿತ ಮೇಲೆರಗಿಸುವ
ಕೋಪದಿಹ ಕುಳಿರ್ಗಾಳಿಯ
ಏಕಾಂಗಿಯಾಗಿ ತಡೆಹಿಡಿವ
ಒಂಟಿ ಹೆಮ್ಮರವಾಗುವ
ಕೆಚ್ಚೆದೆಯಿಲ್ಲ!
ಮೊಗ್ಗಾಗುವ ಆಸೆ
ಮತ್ತೆ
ಅದೇ
ಮೊಗ್ಗಾಗುವ ಆಸೆ!
ಮೈಲು ದೂರದಿರುವ
ನೀರ ಅರಸುತ್ತ
ಉದ್ದಕ್ಕೆ ಬೇರ ಚಾಚಿ
ಬರವನ್ನೇ ಜಯಸುವ
ಮಹದಾಸೆಯಿಲ್ಲ!
ಫಸಲ್ ಭೂಮಿಯ
ಹಿಪ್ಪೆ ಹೀರಿ
ಉದ್ದಗಲಕ್ಕೆ ಚಾಚಿ
ಕಾಡಿನ ಎತ್ತರದ ಮರವಾಗುವ
ಹೆಬ್ಬಯಕೆಯಿಲ್ಲ!
ಮೊಗ್ಗಾಗುವ ಆಸೆ
ಮತ್ತೆ
ಅದೇ
ಮೊಗ್ಗಾಗುವ ಆಸೆ!
Latest posts by rmakkithaya (see all)
- ಸ್ಪೂರ್ತಿ! - July 12, 2021
- ಛಲ! - May 9, 2021
- ಮೊಗ್ಗಾಗುವ ಆಸೆ! - April 11, 2021