ಮನದ ಮಂದಿರದಲ್ಲಿ ದೇವನರಿವಿರಲಾಗೆ
ಮನದಹಮಿಗೆಲ್ಲಿಯದು ಇಂಬು ಪೇಳ್ಕೆಳೆಯ !
ನನದು ನಾನೆಂಬುದಿದುಮೆಲ್ಲ ತೊಡಕಿನ ಮೂಲ
ನಿನದೆಂಬುದತಿ ಸೌಖ್ಯ ಜಾಣಮೂರ್ಖ //
ಈ ದೇಹದ ಮಂದಿರದಲ್ಲಿ ದೇವನ ಅರಿವು ಇರಬೇಕು. ಆ ಅರಿವಿದ್ದಾಗ ಮನಸ್ಸಿನ ಅಹಂಕಾರಕ್ಕೆ ಜಾಗವೇ ಇರುವುದಿಲ್ಲ. ಬದುಕಿನ ಎಲ್ಲ ತೊಡಕುಗಳಿಗೆ ನಾನೆಂಬ ಅಹಂಕಾರವೇ ಮೂಲವಾಗಿದೆ. ಅದನ್ನು ತೊರೆದರಾಯ್ತು. ಎಲ್ಲ ಸಮಸ್ಯೆಗಳೂ ಬಗೆ ಹರಿದಂತೆಯೇ ! ಎಲ್ಲ ನಿನ್ನದೇ ಎಂಬ ಸಮರ್ಪಣಾ ಭಾವದಿಂದ ಬದುಕಿದಾಗ ಬದುಕು ತುಂಬಾ ಸರಳ ಸುಂದರ ಮತ್ತೆ ತುಂಬಾ ಅರ್ಥಪೂರ್ಣ. ಸ್ವಲ್ಪ ಚಿಂತಿಸೋಣ ಗೆಳೆಯರೇ. ಚಿಂತನಶೀಲತೆ ಸಾರ್ಥಕ ಬದುಕಿನ ಲಕ್ಷಣ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021