ಮಡಕೆ ತಾನೊಡೆದೊಡೇನೊಡೆವುದೇನೈ ಮಣ್ಣು !
ಕಡವರವು ಬೆಂದೊಡೇನಳಿವುದೇಂ ಚಿನ್ನ !
ಒಡಲಳಿದೊಡೇನಂತೆ ಕುಂದುವುದೆ ಆತ್ಮತಾ
ಮೃಡತತ್ತ್ವವಿಂತೆ ತಿಳಿ ಜಾಣಮೂರ್ಖ //
ಮಣ್ಣಿನ ಮಡಕೆ ಒಡೆಯುತ್ತದೆ. ಆದರೆ ಮಣ್ಣು ! ಮಡಕೆ ನಿಜವಲ್ಲ. ಆದರೆ ಮಣ್ಣು ನಿಜ ! ನಮ್ಮ ಭಾವಕ್ಕೆ ತಕ್ಕಂತೆ ಅದನ್ನು ರೂಪಿಸಿರುತ್ತೇವಷ್ಟೆ. ನಿಜವಾದುದಕ್ಕೆ ಅಳಿವೆಂತು !? ಅದು ಶಾಶ್ವತ ಹಾಗೇನೇ ಚಿನ್ನ . ಅಗ್ಗಿಷ್ಟಿಕೆಯಲ್ಲಿ ಅದು ನೊಂದು ಬೆಂದರೂ ಸಹ ನಾಶವಾಗದು. ರೂಪು ಹೋಗುತ್ತೆ.ಆದರೆ ಚಿನ್ನ ! ಅದಕ್ಕೇನೂ ನಷ್ಟವಿಲ್ಲ. ಅಂತೆಯೇ ಅದರ ಹೊಳೆಯುವ ಗುಣವೂ ನಾಶವಾಗದು ! ಹಾಗೆಯೇ ಈ ಆತ್ಮತತ್ತ್ವ ಕೂಡ . ಸಾವು ಶರೀರಕ್ಕೆ ಹೊರತು ಆತ್ಮಕ್ಕಲ್ಲ ! ಅಂತೆಯೇ ಶಿವತತ್ತ್ವ. ಇಡೀ ಬ್ರಹ್ಮಾಂಡವೇ ನಾಶವಾದರೂ ಆದಿ ಅಂತ್ಯಗಳಿರದ ಎಡೆಯಿರದ , ಕಡೆಯಿರದ ದಿವ್ಯಶಕ್ತಿ ! ಶಿವ. ಅಣುರೇಣುತೃಣಕಾಷ್ಟಗಳಲ್ಲಿ ಪರಿಪೂರ್ಣನಾಗಿರುವವನವನು. ಆ ಶಿವನಿಗೆ ಶಿವನೇ ಸಾಟಿ. ಆ ದಿವ್ಯಾನಂದ ತತ್ತ್ವಕ್ಕೆ ಶರಣಾಗಿ , ಆರಾಧಿಸುತ್ತಾ ಬದುಕುವುದಷ್ಟೇ ನಮ್ಮ ಕೆಲಸ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021