ಬೆಳ್ಳಿಯೊಳಲೆಯ ತಂದು ಪಾಲುಣಿಸಲೇಂ ಶಿಶುಗೆ
ಮಿಳ್ಳೆ ಮಣ್ಣಿನದಿರಲಿ ಪಾಲು ಪಾಲಲ್ತೆ !?
ಮಿಳ್ಳೆ ಗೊಡವೆಯದೇಕೆ ಪಾಲುಣುವ ಶಿಶುವಿಂಗೆ
ಒಳ್ಳೆ ಸುಜ್ಞಾನ ಪಿಡಿ ಜಾಣಮೂರ್ಖ//
ಇಂದು ಎಲ್ಲವೂ ತೋರಿಕೆಯ ಪ್ರಪಂಚವಾಗಿಬಿಟ್ಟಿದೆ. ಶ್ರೀಮಂತರು ತಮ್ಮ ಮನೆಯ ಮಗುವಿಗೆ ಚಿನ್ನ , ಬೆಳ್ಳಿಯ ಒಳಲೆಯಲ್ಲಿ ಹಾಲುಣಿಸಿದರೆ ಬಡವರು ಮಣ್ಣಿನೊಳಲೆಯನ್ನೇ ಬಳಸುತ್ತಾರೆ. ಇಲ್ಲಿ ಒಳಲೆ ಎಂತಹುದು ಎನ್ನುವುದಕ್ಕಿಂತ ಹಾಲು ಹೇಗಿದೆಯೆಂಬುದೇ ಮುಖ್ಯ. ನೀಡುವ ಭಾವ ಮುಖ್ಯ ! ಇಂದು ಆಧುನಿಕ ನಾಗರಿಕ ಪ್ರಪಂಚ ! ಎಷ್ಟೋ ಮನೆಗಳಲ್ಲಿ ತಾಯಂದಿರಿಗೆ ಮಗುವಿಗೆ ಹಾಲುಣಿಸುವಷ್ಟು ವ್ಯವಧಾನವೂ ಇರುವುದಿಲ್ಲ. ಈ ಮಾತು ಹಾಗಿರಲಿ ಬಿಡಿ. ಹಾಲು ಹಾಲೇ ತಾನೆ !? ಮಗುವಿಗೆ ಮಿಳ್ಳೆಯ , ಹಾಲುಣಿಸುವವರ ಗೊಡವೆ ಇರುವುದೇನು !? ಹಾಗೆಯೇ ಕಲಿಯುವ ವಿದ್ಯಾರ್ಥಿಗೆ ಕಲಿಸುವ ಗುರು , ಧರ್ಮ ಇತ್ಯಾದಿಗಳು ಯಾವುದಾದರೇನಂತೆ ! ಕಲಿವ ಸುಜ್ಞನವೇ ಮುಖ್ಯ. ಆ ಕಡೆಗೆ ಗಮನ ಹರಿಸಬೇಕೇ ಹೊರತು ಗುರುವಿನ ಬಾಹ್ಯ ಸ್ಥಿತಿಗಲ್ಲ ! ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021