ದೇವನೆಂದರೆ ಶಾಂತಿ ದೇವನೆಂದರೆ ಪ್ರೀತಿ
ದೇವನೇ ಬೆಳಕಂತೆ ದೇವನೇ ಕಾಂತಿ
ದೇವಗುರು ದೇವನರಿವೆಲ್ಲವೂ
ದೇವನೈ
ದೇವಸರ್ವಸ್ವವರಿ ಜಾಣಮೂರ್ಖ//
ದೇವರನ್ನು ಎಲ್ಲೆಲ್ಲೋ ಹುಡುಕುತ್ತೇವೆ. ಮನಸ್ಸಿನಲ್ಲಿ ಶಾಂತಿ ಇರುತ್ತದೆಯಲ್ಲಾ ! ಅದೇ ದೇವರು ! ನಿಮ್ಮಿಂದ ಒಬ್ಬರಿಗೆ ಶಾಂತಿ ಸಮಾಧಾನಗಳು ಸಿಕ್ಕಿದರೆ ನೀವೇ ಅವರ ಪಾಲಿಗೆ ದೇವರಾಗಿಬಿಡುತ್ತೀರಿ. ಹಾಗೇ ಇಡೀ ಜಗತ್ತನ್ನೇ ಪ್ರೀತಿಯಿಂದ ಕಾಣಿ ! ಜಗತ್ತೇ ನಿಮ್ಮೊಡನೆ ಬರುತ್ತದೆ ! ಅದರಿಂದ ಸಿಗುವ ಆನಂದ ಬಣ್ಣಿಸಲು ಅಸದಳ ! ದೇವನೇ ಬೆಳಕು ! ಅವನೇ ಕಾಂತಿ ! ದೀಪ್ತಿ ! ದಾರಿತೋರುವ ಗುರುವೇ ದೇವರು ! ಗೆಲುವೇ ದೇವರು ! ಅರಿವೇ ದೇವರು ! ಪ್ರಪಂಚದಲ್ಲಿನ ಚರಾಚರ ವಸ್ತುಗಳೆಲ್ಲವೂ ದೇವನ ಪ್ರತಿರೂಪವೇ ಆಗಿದೆ . ಹಾಗೆ ನೋಡಿದರೆ ಸರ್ವಸ್ವವೂ ದೇವನೇ ಆಗಿರುವಾಗ ಅವನನ್ನು ಹುಡುವುದಾದರೂ ಏಕೆ !? ಈ ಅರಿವು ಮುಪ್ಪುರಿಗೊಂಡ ವ್ಯಕ್ತಿಯಲ್ಲಿ ಬ್ರಹ್ಮನ ಅರಿವಾಗಿ ಸ್ವಯಂ ದೇವನಾಗಿಬಿಡುತ್ತಾನೆ ! -“ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೇ , ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ” ಎಂದಿರುವ ಕವಿವಾಣಿ ಅದೆಷ್ಟು ಸತ್ಯ ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021