ಜಗವೆ ದುಃಖಿಸುತಿರಲು ನಗುವೆಂತು ನೀ ಪೇಳು
ನಗೆಯ ಹೂವರಳೆ ತಾ ನಂದನವು ಲೋಕ
ನಗು ನಗಿಸು ನಗೆಹೂವಿಗಿಂಬಾಗು ಬಾಳೆಲ್ಲ
ಮಿಗೆ ಸಗ್ಗವಾಗ ಕಾಣ್ ಜಾಣಮೂರ್ಖ //
ಜಗತ್ತು ನಗುತ್ತಿದ್ದರೆ ಅದರ ಜೊತೆ ನಾವೂ ನಗಬಹುದು. ಜಗತ್ತು ಎಂದರೆ ನಮ್ಮ ನೆರೆ ಹೊರೆ ಎಂದರ್ಥ. ಎಲ್ಲರ ಮುಖದಲ್ಲೂ ನಗೆಯ ಹೂವು ಅರಳಿದರೆ ಜಗವೊಂದು ನಂದನವಿದ್ದಂತೆ. ಆದರೆ ಜಗತ್ತೇ ದುಃಖಿಸುತ್ತಿರುವಾಗ ನಾನೊಬ್ಬ ನಗಲೆಂತು ಸಾಧ್ಯ !? ಹಾಗೆ ಬಯಸುವುದಾದರೂ ಹೇಗೆ ? ಆದ್ದರಿಂದ ನಾವೂ ನಕ್ಕು , ಇತರರನ್ನೂ ನಗಿಸಿ ನಗುವಿಗೆ ಇಂಬಾಗಿ ಬದುಕಿದಾಗ ಅಂತಹಾ ಬಾಳು ನಮಗಿರುವಾಗ ಸ್ವರ್ಗವಾದರೂ ಏಕೆ !? ಬದುಕೇ ಸ್ವರ್ಗಸದೃಶ ! ಸುಂದರ ! ಅರ್ಥಪೂರ್ಣ ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021