ಮಾನವತೆಗಿರದ ಬೆಲೆ ಧನಕನಕಕೇಕೆ ಬಿಡು
ಧನಿಕತ್ವ ಘನವೇನು ಮಾನವತೆಗಿಂತ !?
ಧನವನುಪಭೊಗಿಸೈ ಪ್ರೀತಿಸೆಲೆ ಮಾನವನ
ಧನವ ಪ್ರೀತಿಸಲೇಕೊ ಜಾಣಮೂರ್ಖ //
ನಮ್ಮ ಬದುಕಿನಲ್ಲಿ ಹಣಕ್ಕೆ ಎಷ್ಟು ಬೆಲೆ ಕೊಡಬೇಕೋ ಅಷ್ಟೇ ಕೊಡಬೇಕು. ಅದೊಂದು ಅಗತ್ಯ ವಸ್ತು ಅಷ್ಟೆ. ಆದರೆ ಅದೇ ಪ್ರಾಧಾನ್ಯವಲ್ಲ. ಮನುಷ್ಯತ್ವಕ್ಕೆ ನೀಡಬೇಕಾದ ಬೆಲೆಯನ್ನು ಮನುಷ್ಯತ್ವಕ್ಕೆ ನೀಡಬೇಕು. ಧನವನ್ನು ಉಪಯೋಗಿಸಬೇಕು. ಮಾನವ ಸಂಬಂಧಗಳನ್ನು ಪ್ರೀತಿಸಬೇಕು. ಆದರೆ ನಾವು ಮಾನವ ಸಂಬಂಧಗಳನ್ನು ಮನಸೋ ಇಚ್ಛೆ , ಬೇಕಾಬಿಟ್ಟಿಯಾಗಿ ಉಪಯೋಗಿಸುತ್ತಿದ್ದೇವೆ. ಹಣವನ್ನು ಪ್ರೀತಿಸುತ್ತಿದ್ದೇವೆ. ಇದರಿಂದಲೇ ಶಾಂತಿ , ನೆಮ್ಮದಿಗಳು ಕಾಣೆಯಾಗುತ್ತಿವೆ. ಸಂಸಾರದಲ್ಲಿ ಕಲಹಗಳುಂಟಾಗುತ್ತಿವೆ. ಇನ್ನಾದರೂ ಮಾನವ ಪ್ರೇಮಕ್ಕೆ ಬೆಲೆಕೊಡುವುದನ್ನು ಕಲಿಯೋಣ. ಭಗವಂತನ ಸೃಷ್ಟಿಯ ಸಮಸ್ತ ಜೀವರಾಶಿಗಳಲ್ಲೂ ಭಗವದಂಶವನ್ನೇ ಕಂಡು ಆ ದೈವತ್ವದ ಪ್ರತಿರೂಪವಾದ ಪವಿತ್ರ ಪ್ರೇಮಕ್ಕೆ ಮಣಿಯೋಣ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021