ಸಣ್ಣದೀ ಹೃದಯ ಮಿಗೆ ಮಿಡಿಯುವಿಕೆ ಸಣ್ಣದೇ ?
ಸಣ್ಣದೀ ಮಸ್ತಷ್ಕ ತರ್ಕವದು ಕಿರಿದೆ ?
ಕಣ್ಣತೆರೆದೊಮ್ಮೆ ಕಾಣ್ ಹೃದಯದಿಂ ಚಿಂತಿಸೈ
ಸಣ್ಣದಲ್ಲವೊ ಬದುಕು ಜಾಣಮೂರ್ಖ //
ನಮ್ಮ ಹೃದಯವೇನೋ ಗಾತ್ರದಲ್ಲಿ ಸಣ್ಣದಿರಬಹುದು. ಆದರೆ ಅದರ ಮಿಡಿಯುವಿಕೆ ದೈವಸದೃಶವಾದುದು. ಹಾಗೇನೇ ಮೆದುಳೂ ಕೂಡ ಸಣ್ಣದೇ ಇರಬಹುದು. ಆದರೆ ಅದರ ವಿಮರ್ಶೆ , ತರ್ಕಗಳು ಸಣ್ಣವೇನು !? ಓ ಗೆಳೆಯ ಒಮ್ಮೆ ಕಣ್ಣತೆರೆದು ನೋಡು . ಬುದ್ಧಿಯಿಂದ ತರ್ಕಿಸಬೇಕೇನೋ ನಿಜ. ಆದರೆ ಎಲ್ಲವನ್ನೂ ಬುದ್ಧಿಯಿಂದಲೇ ತರ್ಕಿಸಿದರೆ ಸಂಬಂಧಗಳು ಉಳಿಯುತ್ತವೆಯೇ !? ಹಣ , ಆಸ್ತಿ ಎಲ್ಲವೂ ಕಳೆಯುವಂತಹವು ಆದರೆ ಬದುಕು ! ಈ ಬದುಕು ಬಹಳವೇ ದೊಡ್ಡದು. ಸಾವಿನಾಚೆಯ ಬದುಕು ಬೇರೆ ಇದೆ ಅಂತ ಪ್ರಾಜ್ಞರು ಹೇಳುತ್ತಾರೆ. ಆ ಬದುಕನ್ನು ಕಟ್ಟಿಕೊಳ್ಳಲು ಇಂದಿನ ನಮ್ಮ ಬದುಕು ನ್ಯಾಯಸಮ್ಮತವಾಗಿರಬೇಕಲ್ಲವೆ !? ಸತ್ಕರ್ಮ , ಸಚ್ಚಿಂತನೆ , ಸದ್ಧರ್ಮಿಯಾಗಿದ್ದುಕೊಂಡು ಮುಕ್ತಿಮಾರ್ಗದ ಸೋಪಾನವೇರಬೇಕು. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021