ಸೆರೆ ಕುಡಿದು ಪರಿಣಾಮವರಿಯಬೇಕೇನು !?
ಅರಿತರಾಗದೆ ಕಂಡು ಕೇಳಿ ಆ ಹದನು !?
ಗುರಿಯನರಿಯದೆ ಲೋಗರೆದ್ದೆದ್ದು ಬಿದ್ದುದನು
ಅರಿತರಾಯ್ತದೆ ದಾರಿ ಜಾಣಮೂರ್ಖ //
ಬದುಕಿನಲ್ಲಿ ಎಲ್ಲವನ್ನೂ ಅನುಭವಿಸಿಯೇ ಕಲಿಯಬೇಕಿಲ್ಲ ! ನೋಡಿಯೂ ಪಾಠ ಕಲಿಯಬಹುದು. ಆದರೆ ಕಲಿಯುತ್ತಿಲ್ಲ ಅಷ್ಟೆ.ಕುಡಿತದ ಮತ್ತೆ ಮದ್ಯಪಾನದ ದುಷ್ಪರಿಣಾಮಗಳನ್ನು ಕುಡಿದು ಅನುಭವಿಸಿಯೇ ತಿಳಿಯಬೇಕಾದ ಅಗತ್ಯವಿಲ್ಲ ! ಅದರಿಂದ ಅನ್ಯರು ಹಾನಿಗೊಳಗಾಗಿರುವುದನ್ನು ಕಂಡೂ ಸಹ ತಿಳಿಯಬಹುದು. ಅಲ್ಲವೇ !? ಬದುಕಿನ ಗುರಿಯನರಿಯದೆ ಅನ್ಯರು ಪಡುತ್ತಿರುವ ಪಾಡನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಕು ! ಅದೇ ನಮ್ಮ ಬದುಕನ್ನು ಕಟ್ಟಿಕೊಳ್ಳಲು ಒಂದು ಸುಂದರ ಹಾದಿಯಾಗುತ್ತದೆ. ಅವರು ಗೈದ ತಪ್ಪನ್ನು ನಾವೂ ಸಹ ಮಾಡಿಯೇ ತಿಳಿಯಬೇಕೇನು !? ಏನಿಲ್ಲವಲ್ಲ !? ಒಳಿತಾದುದನ್ನು ಅನುಭವದಿಂದ ಕಲಿಯಲು ಇಚ್ಛಿಸದ ಈ ಮನಸ್ಸು ಕೆಟ್ಟದ್ದನ್ನು ಬಹುಬೇಗ ಸ್ವೀಕರಿಸುತ್ತದೆ ಅಷ್ಟೇ ಅಲ್ಲ ತಾನು ಗೈದುದೇ ಸರಿ ಅಂತ ಸಮರ್ಥಿಸಿಕೊಳ್ಳುತ್ತದೆ ! ವಿತಂಡವಾದ ಮಾಡುತ್ತದೆ ! ಎಂತಹಾ ವಿಪರ್ಯಾಸವಲ್ಲವೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021