ತೃಪ್ತಿನೀಡದ ಸಿರಿಯದೆಂತ ಸಿರಿ ಪೇಳ್ ಕೆಳೆಯ
ತಪ್ತವಾಗಿಸುತೆದೆಯ ಒಳಗೆ ಬಡತನವೆ !?
ಸಪ್ತಖಂಡವನಾಳೆ ಖನ್ನತೆಯ ದೊರೆಯಾಗಿ !
ಗುಪ್ತವಾಗಿಸಲೇನೊ ಜಾಣಮೂರ್ಖ //
ಕೆಲವರಿಗೆ ತುಂಬ ಐಶ್ವರ್ಯ ಇರುತ್ತೆ. ಅವರು ಜಗತ್ತಿನ ಕಣ್ಣಿಗೆ ತುಂಬಾ ಶ್ರೀಮಂತರು. ಒಳಗೆ ಬಡವರು. ಹೃದಯ ಬರಿದಾಗಿರುತ್ತದೆ. ಎಷ್ಟು ಸಿರಿಯಿದ್ದರೇನು ? ನಾಯ್ಮೊಲೆಯ ಹಾಲು !! ಸಪ್ತದ್ವೀಪ ವಸುಂಧರೆಗೇ ಪ್ರಭುಗಳಾಗಿ ಮೆರೆದವರಾರೂ ನೆಮ್ಮದಿಯಿಂದ ಇದ್ದವರಲ್ಲ ! ಮನದ ಖಿನ್ನತೆಯೊಳಗೆ ನರಳಿದವರೇ ! ಒಳಗದನ್ನು ಅದುಮಿಟ್ಟು ಮೇಲೆ ಸಂತಸದ ಮುಖವಾಡ ಹಾಕಿದವರೇ ! ಇಂದಾಗುತ್ತಿರುವುದೂ ಅದೇ ತಾನೆ !? ನಮ್ಮ ಆಂತರ್ಯದಲ್ಲಿ ಮೂರ್ಛಾವಸ್ಥೆಯಲ್ಲಿರುವ ನೆಮ್ಮದಿಯ ನೆಲೆಯ ಕಡೆ ಸ್ವಲ್ಪ ಶಾಂತವಾಗಿ ದಿಟ್ಟಿ ಬೀರಿ ! ಅಲ್ಲಿ ಭಗವಂತನಿದ್ದಾನೆ ! ಶಾಂತವಾಗಿಯೇ ಅವನೊಡನೆ ಸೇರಿ ಶಾಂತತೆಯೇ ನಾವಾಗಿಬಿಡಬೇಕು. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021