ನವನೀತಮೀ ಬದುಕು ಸವಿವ ಸಹೃದಯಂಗೆ
ಭವದಿ ಬವಣಿಪಗಿದುವೆ ಬಿಡಿಸದಾ ಗಂಟು
ಸವಿದು ಬದುಕೇ ತಾನುಮೆಂದು ಭಾವಿಪ ಭವಿಗೆ
ಅವಲೀಲೆ ಶಿವಲೀಲೆ ಜಾಣಮೂರ್ಖ //
ಬದುಕನ್ನು ಸವಿಯಬೇಕಲ್ಲದೇ ಇದನ್ನೇ ಬಲೆಯಾಗಿಸಿಕೊಂಡು ಸಿಕ್ಕಿ ತೊಳಲಾಡಬಾರದು. ಹಾಗೆ ಸವಿವ ಸಹೃದಯನಿಗೆ ಬದುಕು ನವನೀತವಿದ್ದಂತೆ ! ಅಂಟಿಕೊಂಡು ಆದರೆ ಅಂಟದಂತೆ ಸುಖದಿಂದಿದ್ದರೆ ಅದರ ಸವಿಯ ಮಾತೇ ಬೇರೆ ! ಅಂಟಿಕೊಂಡು ಮುಳಗಿದವಗೆ ಇದು ಕಗ್ಗಂಟು ! ಇನ್ನು ಬದುಕೇ ತಾನು , ತಾನೇ ಬದುಕು ಎಂಬ ಭಾವದಲ್ಲಿ ಬದುಕನ್ನು ಕಳೆಯುವವನಿಗಂತೂ ಇದು ಅತಿ ಸಹಜವಾಗಿಯೂ , ಭಗವಂತನ ಲೀಲಾ ವಿನೋದದಂತೆಯೂ ಗೋಚರಿಸಿ ಆನಂದದಿಂದ ಕಳೆಯುತ್ತಾರೆ. ಕೆಲವರ ಪಾಲಿಗಿದು ನೀರ ಮೇಲಣ ಗುಳ್ಳೆ ! ಕೆಲವರಿಗಿದು ಚಿರವೆಂಬ ಭಾವ ! ಕೆಲವರಂತೂ ಮರಣದಾಚೆಗೆ ಏನಿದೆಯೆಂಬ ಅನ್ವೇಷಕರು ! ಹೀಗೆ ! ನಾವು ಹೇಗೆ ಸ್ವೀಕಾರ ಮಾಡುತ್ತೇವೋ ಹಾಗೆ ! ಆದರೆ ವರ್ತಮಾನದಲ್ಲಿ ಸಂತೋಷದಿಂದ ಬದುಕುವುದಿದೆಯಲ್ಲಾ ಅದೇ ಬಹಳ ಸುಖವಾದ ಬದುಕು. ಅಲ್ಲವೇ ಗೆಳೆಯರೇ !
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021