ಏನು ಸಾಧನೆ ಮನದೊಳೇನು ಶೋಧನೆ ಜಗದಿ
ಏನೇನು ದಿಗ್ವಿಜಯವೆಲ್ಲೆಗಳ ದಾಟೆ !
ಏನಾದೊಡೇನೆಲ್ಲ ಕೊನೆಗೆ ಮೌನವೆ ಗತಿಯು
ನಾನತ್ವ ತೊರೆ ಮೊದಲು ಜಾಣಮೂರ್ಖ //
ಅಬ್ಬಾ , ಈ ಜಗತ್ತಿನಲ್ಲಾಗುತ್ತಿರೋ ಸರ್ವತೋಮುಖ ಬೆಳವಣಿಗೆಗಳನ್ನು ಗಮನಿಸಿದರೆ ಅಚ್ಚರಿಯಾಗುತ್ತದೆ. ಅದೆಂತೆಂತಹಾ ಸಂಶೋಧನೆಗಳು ! ಕ್ರಾಂತಿಗಳು ! ಎಂತೆಂತಹಾ ದಿಗ್ವಿಜಯಗಳು ! ಅಗ್ನಿದಿವ್ಯಗಳು ! ನಾಗದಿವ್ಯಗಳು ! ಅದರಲ್ಲೆಲ್ಲಾ ಗೆದ್ದು ಅಸ್ತಿತ್ವ ಸಾಧಿಸಿದ ಪರಿ ! ಬದುಕಿನ ಎಲ್ಲೆಯನ್ನು ದಾಟಿದಂತಹಾ ಬಗೆ !! ಎಲ್ಲಾ ಸರಿ , ಇವೆಲ್ಲಾ ಹೊರಗಿನ ಕ್ರಾಂತಿಯಾಯ್ತು ! ಆದರೆ ಆಂತರ್ಯದ ಕ್ರಾಂತಿಯೆಂತು !? ಏನು ಸಾಧನೆಗೈದರೇನು !! ಮೌನಕ್ಕೆ ಶರಣಾಗುವುದೇ ಕೊನೆ ! ಅದೇನೇ ಸಾಧನೆಯಾಗಿದ್ದರೂ ಪ್ರಕೃತಿಯ ಅನಂತತೆಯ ಎದುರಲ್ಲಿ ಚಿಕ್ಕದೇ ತಾನೇ ! ಈ ಅರಿವು ಮೂಡಿದಾಗ ಮೌನಕ್ಕೆ ಶರಣಾಗಿಬಿಡುವುದು. ಇದು ಸಾಧಕರ ಅಂತಿಮ ಸ್ಥಿತಿ ! ಮತ್ತೆ ನಾನತ್ವವಾದರೂ ಏಕೆ ? ಅಲ್ಲವೇ ಗೆಳೆಯರೇ ?!
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021