ನೊಂದವಗೆ ನೊಂದವನ ಬಂಧವಲ್ಲದೆ ಮತ್ತೆ
ಬಂದು ಹೋಗುವರೆಲ್ಲ ಬಂಧುವಾಗುವರೆ ?
ಕುಂದುಗಳನರಿತು ತಾ ಬಂಧುರದಿ ಬೆರೆವವರೆ
ಬಂಧುರದ ಬಂಧುಗಳೊ ಜಾಣಮೂರ್ಖ //
ಬದುಕಿನಲ್ಲಿ ನೊಂದು ಬೆಂದವರಿಗೆ ಮಾತ್ರ ನೊಂದವರ ನೋವು ಏನೆಂದು ತಿಳಿಯುವುದು. ನೊಂದವರು ಮಾತ್ರ ನೊಂದವರಿಗೆ ಸ್ಪಂದಿಸುವುದು. ಅವರೇ ನಿಜವಾದ ಬಂಧುಗಳು. ಬಾಕಿಯವರೆಲ್ಲ ಬಂದು ಹೋಗುವವರಷ್ಟೆ. ಅದರಲ್ಲೂ ಬದುಕಿನಾಳದ ನೋವುಗಳನ್ನು ಗುರುತಿಸಿ ಸ್ವಯಂ ನೆರವಿಗೆ ಬರುವವರು ಭಗವದ್ ಸ್ವರೂಪಿಗಳೇ ಆಗಿರುತ್ತಾರೆ. ಕಂಡೂ ಕಾಣದಂತೆ ಜಾಣಗಿವುಡು , ಜಾಣಕುರುಡು ಪ್ರದರ್ಶಿಸುವವರೇ ಈ ಕಲಿಗಾಲದಲ್ಲಿ ಹೆಚ್ಚು. ಹಾಗೆ ನೆರವಾಗುವವರು ಅತಿ ದುರ್ಲಭ. ಅಲ್ಲವೇ ಗೆಳೆಯರೇ !? ಹಾಗೆ ನೆರವಾಗುವವರು ತಮ್ಮ ಕಷ್ಟವನ್ನು ಪರಿಗಣಿಸುವುದೇ ಇಲ್ಲ. -” ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು ” ಎನ್ನುತ್ತಾರೆ ಕವಿ ಪು.ತಿ.ನರಸಿಂಹಾಚಾರ್ ರವರು ತಮ್ಮ ಶಬರಿ ಗೀತನಾಟಕದಲ್ಲಿ. ಅವರೇ ಭಗವಂತ ಕಳುಹಿಸಿದ ಬಂಧುಗಳಾಗಿರುತ್ತಾರೆ. ಅನುಭವಿಸಿದವರಿಗೆ ಮಾತ್ರ ಈ ಸ್ಥಿತಿಯ ಅನುಭವವಾಗಿರುತ್ತದೆ ಅಷ್ಟೆ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021