ಸೃಷ್ಟಿಯೊಳಗುಂಟೆ ಸಟೆ ಕಪಟ ಠಕ್ಕುಗಳೇಂ !
ವ್ಯಷ್ಟಿಯೋ ಸಮಷ್ಟಿಯೊ ಒಳಹೊಕ್ಕು ನೋಡು
ಕಷ್ಟವಾವುದೊ ತೂರು ಸಾಜದೊಳಗಿದ್ದುಬಿಡು
ಇಷ್ಟದೊಳು ಬಾಳೇಳು ಜಾಣಮೂರ್ಖ //
ಈ ಸೃಷ್ಟಿಯಲ್ಲಿ ಸುಳ್ಳು , ಮೋಸವೆಂಬುದೇ ಇಲ್ಲ. ನಾವೆಷ್ಟು ನಿಷ್ಠರಾಗಿರುತ್ತೇವೋ ಪ್ರಕೃತಿಯೂ ಅಷ್ಟೇ ಪ್ರಾಮಾಣಿಕ ! ಇದರಲ್ಲಿ ಎರಡು ಮಾತಿಲ್ಲ ! ಈ ಸೃಷ್ಟಿಯಲ್ಲಿ ಕಪಟ , ಮೋಸ ಎಂದು ಕಂಡು ಬಂದದ್ದನ್ನು ಬಿಟ್ಟುಬಿಡಬೇಕು ! ತೂರಿಬಿಡಬೇಕು. ಸಹಜವಾಗಿ ಬದುಕಬೇಕು. ಪ್ರಕೃತಿ ಎಷ್ಟು ಸಹಜವಾಗಿದೆಯೋ ಅಷ್ಟು ಸಹಜವಾಗಿ ! ಚಿಕ್ಕದಾಗಿಯೋ ! ಬೃಹತ್ತಾಗಿಯೋ ! ಪ್ರಕೃತಿಯನ್ನು ನೋಡಿದಾಗ ಲವಲೇಶ ಮಾತ್ರವೂ ಕಪಟವಿಲ್ಲ ! ಭೂ ತಾಯಿಯನ್ನು ನಂಬಿ ಕೆಟ್ಟವರಾರಿದ್ದಾರೆ ! ಪ್ರಕೃತಿಯ ಮಡಿಲಲ್ಲಿ ನಂಬಿ ಬದುಕಿದವರ ಬದುಕು ಸುಂದರ ! ಪ್ರಕೃತಿಯೇ ಹೀಗೆ. ಅಲ್ಲವೇ ಗೆಳೆಯರೇ.
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021