ನಿನ್ನದೇನೀ ನೆಲವು ನಿನ್ನದೇನೀ ಜಲವು
ನಿನ್ನದೇನೀ ಬಿಸಿಲು ನಿನ್ನದೇ ಸತ್ತ್ವ ?
ನಿನ್ನದೇನೀ ಹೂವು ಸೌಗಂಧಮೆಂತ ಬಗೆ
ನಿನ್ನದೇನಿಹುದೇನಿಲ್ಲಿ ಜಾಣಮೂರ್ಖ //
ಸ್ನೇಹಿತರೇ ನನ್ನದು , ನನ್ನದು ಅಂತ ಹೊಡೆದಾಡುವ ಈ ನೆಲ ನಮ್ಮದಲ್ಲ ! ಈ ಜಲ ನಮ್ಮದಲ್ಲ ! ಸೂರ್ಯನ ಬಿಸಿಲು ! ಈ ಭೂಮಿಯೊಳಗಿನ ಸತ್ತ್ವ ಇದ್ಯಾವುದೂ ನಮ್ಮದಲ್ಲ ! ಇದೆಲ್ಲಾ ಭಗವಂತ ಕೊಟ್ಟಿರೊ ಸುಂದರ ಕೊಡುಗೆಗಳಷ್ಟೆ. ಇವುಗಳನ್ನಲ್ಲಾ ಉಪಯೋಗಿಸಿಕೊಂಡು ಒಂದು ಗಿಡ ಬೆಳೆದು ಹೂ ಬಿಡುತ್ತದೆ ಎಂದಿಟ್ಟುಕೊಳ್ಳೋಣ. ಆ ಹೂವು , ಅದರ ಸೌಂದರ್ಯ ಮತ್ತದರ ಪರಿಮಳ ಇವಾವುವೂ ನಮ್ಮದಲ್ಲ. ಆ ಹೂವು ನಮ್ಮದಂತೂ ಅಲ್ಲವೇ ಅಲ್ಲ ! ಆದರೂ ನಾನು ಬೆಳಸಿದ ಗಿಡ ಎನ್ನುತ್ತೇವೆ. ಆ ಹೂವಿನ ಮೇಲೆ ನಮ್ಮದೇ ಅಧಿಕಾರ ಎಂಬ ಭ್ರಮೆಯೊಳಾಡುತ್ತೇವೆ ! ಇದು ಭ್ರಮೆಯಲ್ಲದೇ ಮತ್ತೇನು ? ಇದನ್ನು ಬಿಟ್ಟು ಹೊರಗೆ ಬರೋಣ. ಇಲ್ಲಿ ನಮ್ಮದೆನ್ನುವುದು ಏನೂ ಇಲ್ಲ. ಅಷ್ಟೇ ಏಕೆ ಈ ಶರೀರವೇ ನಮ್ಮ ಜೊತೆ ಎಷ್ಟು ದಿನ ಇರುತ್ತೆ ಅನ್ನೋ ಖಾತ್ರಿ ಇಲ್ಲ ! ಮತ್ತೇಕೆ ಈ ಭ್ರಮಾಧೀನವಾದ ಬದುಕು !! ಅಲ್ಲವೇ ಗೆಳೆಯರೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021