ದೇವನಿತ್ತಿಹ ದನಿಯನಿತ್ತು ನಲಿವುದು ಪಿಕವು
ಹೂವಿತ್ತು ಸಾರ್ಥಕವು ಹೂ ಕಂಟಿ ಬದುಕು
ದೇವನಿತ್ತುದನಿತ್ತು ಸೃಷ್ಟಿ ತಾಂ ನಲಿಯುತಿರ
ಲಾವೆತ್ತ ಸಾಗಿಹೆವೊ ಜಾಣಮೂರ್ಖ //
ಈ ಸೃಷ್ಟಿಯಲ್ಲಿ ಭಗವಂತನಿತ್ತಿಹ ಇಂಪಾದ ಧ್ವನಿಯನ್ನು ಸೃಷ್ಟಿಗೇ ಅರ್ಪಿಸಿ ನಲಿಯುತ್ತದೆ ಕೋಗಿಲೆ. ಹಾಗೇನೇ ಹೂವಿನ ಗಿಡವು ಹೂವಿತ್ತು ತನ್ನ ಬದುಕನ್ನು ಸಾರ್ಥಕ ಮಾಡಿಕೊಳ್ಳುತ್ತೆ . ಇಡೀ ಸೃಷ್ಟಿಯಲ್ಲಿ ಎಲ್ಲವೂ ಭಗವಂತ ತನಗಿತ್ತ ಸಾಮರ್ಥ್ಯದಿಂದ ಸುಂದರವಾದುದನ್ನು , ಒಳಿತಾದುದನ್ನೇ ಜಗತ್ತಿಗೆ ಅರ್ಪಿಸಿ ಧನ್ಯವಾಗುತ್ತಿವೆ. ತಮ್ಮ ಋಣವನ್ನು ತೀರಿಸಿಕೊಳ್ಳುತ್ತಿವೆ. ಆದರೆ ನಾವು ! ಈ ಅಗಾಧ ಸೃಷ್ಟಿಯ ಹೆಮ್ಮೆಯ, ಬುದ್ಧಿವಂತ ಮಕ್ಕಳು ನಾವುಗಳು. ಏನು ಕೊಡುತ್ತಿದ್ದೇವೆ !? ಏನಾದರೂ ಕೊಡಲೇ ಬೇಕಲ್ಲವೇ !? ಸ್ವಲ್ಪ ಚಿಂತಿಸೋಣ. ಏನಾದರೂ ನೀಡೋಣ. ಕೊಡುವುದನ್ನು ಕೃತಜ್ಞತೆಯಿಂದ ಕೊಡೋಣ. ಕೊಟ್ಟು ಧನ್ಯರಾಗೋಣ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021