ಸರಳಮಿರಲೀ ಬಾಳು ಬೆಳಗಲೈ ಚಿಂತನೆಗ
ಳರಳಲೈ ಮನವು ಮಿಗೆ ಕೆರಳದಿರಲಯ್ಯ !
ಸರಳತೆಗೆ ಸಹಿಸದವರುರಿದರುರಿಯಲಿ ಬಿಟ್ಟು
ಶರಣನೊಲು ಬದುಕೇಳು ಜಾಣಮೂರ್ಖ//
ಈ ಜಗತ್ತಿನಲ್ಲಿ ನಾವು ಹೇಗೆ ಬದುಕಿದರೂ ಕಷ್ಟ. ತುಂಬಾ ಸರಳವಾಗಿ ಬದುಕಿದರೆ ಇವನು ಈ ಶತಮಾನಕ್ಕೆ ಲಾಯಕ್ಕಿಲ್ಲದವನೆಂದು ಜರಿಯುತ್ತಾರೆ. ಸ್ವಲ್ಪ ಆಧುನಿಕರಾಗಿ ಬದುಕಿದರಂತೂ-” ನೋಡು ಅವನಿಗೆ ತಲೆಯೇ ನಿಲ್ತಾ ಇಲ್ಲ” ಎನ್ನುತ್ತಾರೆ . ಹೇಗೆ ಬದುಕಬೇಕೋ ಇವರ ನಡುವೆ ! ಭಗವಂತನೇ ಬಲ್ಲ. ಅದಕ್ಕೆ ನಾವು ಸರಳವಾಗಿ ಬದುಕಿ ಉದಾತ್ತವಾಗಿ ಚಿಂತಿಸೋಣ. ಇಂತಹಾ ಸರಳ ಸುಂದರ ಬದುಕನ್ನು ಕಂಡು ಸೈರಿಸದವರು ಕರಳಿದರೆ ಕೆರಳಲಿ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದು ಬೇಡ. ಒಬ್ಬ ಶರಣನಂತೆ ಬದುಕಿಬಿಡೋಣ. ಅನಂತವಾದ ಈ ದೈವ ಸೃಷ್ಟಿಗೆ ಶರಣಾಗಿ ಬದುಕಿದಾಗ ನಾನತ್ವ ನಶಿಸುತ್ತದೆ , ಮನಸ್ಸು ಸಂಸ್ಕಾರಗೊಳ್ಳುತ್ತದೆ , ಆತ್ಮಸಾಕ್ಷಾತ್ಕಾರವಾಗುತ್ತದೆ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021