ರವಿವಾರವೆನ್ನುತಲಿ ರಜೆ ಹಾಕುವನೆ ರವಿಯು !?
ಕವಿಯುತೆನ್ನುತಲಿರುಳು ಕಾಲ ನಿಲ್ಲುವುದೆ !?
ಭವದ ಭಾರಕೆ ಸೋತು ವಿಶ್ರಮಿಪುದೇ ಹೃದಯ !
ಭವದಿ ಬದುಕೇ ದೈವ ಜಾಣಮೂರ್ಖ //
ಎನೋ ಒಂದೊಂದು ಸಾರಿ ಇಂತಹಾ ಚಿಂತನೆಗಳು ಮನದಿ ಸುಳಿದಾಗ ಎಷ್ಟು ವಿಸ್ಮಯ ಈ ಬದುಕು ಅನ್ನಿಸುತ್ತೆ. ಭಾನುವಾರ ನನಗೂ ವಿಶ್ರಾಂತಿ ಬೇಕು ಅಂತ ಸೂರ್ಯ ಬಾರದೇ ಇರುವನೇನು ? ರಾತ್ರಿಯಾಯಿತು , ಕತ್ತಲಾವರಿಸಿತು ಅಂತ ಕಾಲ ನಿಲ್ಲುತ್ತದೇನು !? ಅಬ್ಬಾ ! ಈ ಭವದ ಚಿಂತೆಗಳಲ್ಲಿ ಬಸವಳಿದೆನೆಂದು ಹೃದಯದ ಬಡಿತ ನಿಂತು ಬಿಡುವುದೇನು !? ಇಲ್ಲ ತಾನೆ ? ಸೂರ್ಯದೇವನಾಗಲಿ , ಕಾಲವಾಗಲಿ , ಹೃದಯವಾಗಲಿ ಅದೆಂತಹಾ ಕರ್ತವ್ಯಪರರು ! ಈ ಬದುಕಿನಲ್ಲಿ ಕರ್ತವ್ಯವೇ ದೇವರು. ಕಾಯಕವೇ ಕೈಲಾಸ ! ಆ ಕರ್ತವ್ಯವೇ ಬಾಳಿನ ಉಸಿರಾಗಬೇಕು. ಒಬ್ಬರು ತತ್ತ್ವಜ್ಞಾನಿಗಳು ಹೇಳೋದೇನೆಂದರೆ -” ದೇವರು ಎಂದಿಗೂ ನಾಮಪದವಲ್ಲ!ದೇವನೆಂದರೆ ಕ್ರಿಯಾಪದ ” ( God is not a noun , God is a verb) ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021