ಬಾಳಿನೀ ನಾಟಕದಿ ವಿಧಿಯ ಗಾಳವದೆಂತೊ
ಧಾಳಿ ಗೈದೆಳೆವುದೈ ಮರುಳ ಮಾಡುವುದೊ !
ಧೂಳಾಗಿಪುದೊ ಬಾಳು ದಾಳವಾಗದಿರಯ್ಯ
ಏಳು ಎಚ್ಚರನಾಗೊ ಜಾಣಮೂರ್ಖ //
ಈ ಬಾಳ ನಾಟಕದಲ್ಲಿ ವಿಧಿವಿಲಾಸವನ್ನು ಅರಿತವರು ಯಾರು ! ಅದು ಯಾರಿಗೆ ಹೇಗೆ ಗಾಳ ಹಾಕುತ್ತದೆಯೋ ಬಲ್ಲವರಾರು !? ಧಾಳಿ ಮಾಡಿ ಬಿಡುತ್ತದೆ. ಅದರ ಧಾಳಿಗೆ ಮರುಳಾಗದವರೇ ಇಲ್ಲ. ಬದುಕೇ ಧೂಳೀಪಟವಾಗಿಬಿಡುತ್ತದೆ. ಅದರಿಂದ ನಾವು ಹೇಗಿರಬೇಕೆಂದರೆ ಹೆಜ್ಜೆ ಹೆಜ್ಜೆಗೆ ಎಚ್ಚರವಾಗಿರಬೇಕು. ಬದುಕಿನ ಲೌಕಿಕ ಉಪಾದಿಗಳ ಸೆಳೆತಕ್ಕೆ ಸಿಲುಕಬಾರದು. ಸಿಲುಕಿದರೂ ಮಿತಿಯಲ್ಲಿರಬೇಕು. ಮಿತಿಮೀರಿದರೆ , ಅತಿಯಾಸೆ ಪಟ್ಟರೆ ಗತಿಕೇಡು ! ಈ ಸತ್ಯವನ್ನರಿತು ಎಚ್ಚರದಿಂದ ಮುಂದಡಿಯಿಡಬೇಕು. ನಮ್ಮ ಬದುಕಿನ ಪರಿಯನ್ನು ಕಂಡು ವಿಧಿಯೇ ತಬ್ಬಿಬ್ಬಾಗುವಂತಿರಬೇಕು ನಮ್ಮ ಬದುಕು ! ಅದಕ್ಕೆ ಕಷ್ಟ ಪಡಬೇಕಿಲ್ಲ ! ಸತ್ಯ , ಋಜುತ್ವ , ಧ್ಯಾನ , ಮನೋನಿಗ್ರಹ ಮೊದಲಾದ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಬೇಕಷ್ಟೆ ! ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021