ಮುಚ್ಚಿರುವ ಬಾಗಿಲೆಡೆಗೈದಿ ನೋಡುವೆಯೇನ ?
ಹೊಚ್ಚ ಹೊಸ ದಾರಿಯಿದೆ ಇತ್ತಕಡೆ ನೋಡ !
ಇಚ್ಛೆಗಳ ತೊತ್ತಾಗಿ ಅಳಿದವೇನೊಳದನಿಗ
ಳೆಚ್ಚರದೊಳಡಿಯನಿಡು ಜಾಣಮೂರ್ಖ//
ನಮ್ಮ ಪಾಲಿಗೆ ಒಂದು ಅವಕಾಶದ ಬಾಗಿಲು ಮುಚ್ಚಿದೆ ಎಂದಾದರೆ ಅದು ಮತ್ತೆ ಬರುವುದೇ ಇಲ್ಲ ಎಂದಲ್ಲ. ಅದರ ಕಡೆಗೇ ಗಮನ ಹರಿಸಿ ನಮಗಿರುವ ಸಾಮರ್ಥ್ಯವನ್ನು ಉಪಯೋಗಿಸಿಕೊಂಡು ಗುರಿ ಮುಟ್ಟಲು ಬೇರೆ ಬೇರೆ ಹತ್ತು ಹಲವು ಅವಕಾಶಗಳಿರುತ್ತವೆ. ಅವುಗಳ ಕಡೆಗೆ ಗಮನ ಹರಿಸಿ ಗುರಿಮುಟ್ಟಬೇಕೇ ಹೊರತು ಮುಚ್ಚಿರುವ ಬಾಗಿಲೆಡೆಗೇ ನೋಡುತ್ತಾ ಕುಳಿತರೆಂತು ?! ಎಂದಿಗೂ ನಾವು ನಮ್ಮ ಇಚ್ಛೆಗಳ ಮತ್ತೆ ಆಸೆಗಳ ದಾಸರಾಗಬಾರದು. ಹಾಗೆ ತೊತ್ತಾದರೆ ನಮ್ಮ ಆಂತರ್ಯದ ಆಳದಲ್ಲಿ ಹುದುಗಿರಬಹುದಾದ ಮೌಲ್ಯಾದರ್ಶಗಳು ಹೊರಗಿನ ಮಾಯಾ ಪ್ರಪಂಚದ ದಟ್ಟಣೆಯಲ್ಲಿ ಮುಚ್ಚಿಹೋಗಿಬಿಡಬಹುದು. ಹಾಗಾಗಬಾರದು. ಎಚ್ಚರದಿಂದ ಆಲೋಚಿಸಿ ಮುಂದಿನ ಹೆಜ್ಜೆಯಿಡಬೇಕು. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021