ಕಬ್ಬು ಸಿಹಿಯೆಂದು ಬಲು ಜಗಿಜಗಿದು ಹೀರಲೇಂ
ಹಬ್ಬದೊಳ್ಮಿತಿ ಮೀರುತೊಬ್ಬಟ್ಟ ತಿನಲೇನು
ಕಬ್ಬು ಗಬ್ಬಂತೆ ಮೇಣ್ ಹಬ್ಬವುಬ್ಬರಮಂತೆ
ಒಬ್ಬಗೆಲ್ಲವ ಹೊರಿಸೆ ಜಾಣಮೂರ್ಖ //
ಕಬ್ಬು ಸಿಹಿಯೆಂದು ಸಿಕ್ಕಾಪಟ್ಟೆ ಜಗಿಜಗಿದು ಹೀರಿದರೆ ಒಂದು ಹಂತದಲ್ಲಿ ಅದು ತನ್ನ ಸಿಹಿ ಕಳೆದುಕೊಂಡು ಸಪ್ಪೆಯಾಗುತ್ತದೆ ಅಲ್ಲವೇ !? ಹಾಗೆಯೇ ಒಬ್ಬಟ್ಟು ಇಷ್ಟವೆಂದು ಒಬ್ಬಟ್ಟನ್ನು ಮಿತಿಮೀರಿ ತಿಂದರೆ ಹೊಟ್ಟೆ ಉಬ್ಬರ , ನೋವುಗಳಿಗೆ ಈಡಾಗಬೇಕಾಗುತ್ತದೆ ಅಷ್ಟೆ. ಇವುಗಳು ಹೇಗೋ ಹಾಗೆ ಒಬ್ಬ ವ್ಯಕ್ತಿ ಇವನು ಕಾರ್ಯವೆಸಗುತ್ತಾನೆ ಅಂತ ಎಲ್ಲವನ್ನೂ ಒಬ್ಬನ ಮೇಲೇ ಹೊರಿಸಿದರೆ ಅವನೂ ತನ್ನ ಆಸಕ್ತಿ , ಸೃಜನಶೀಲತೆಗಳನ್ನು ಕಳೆದುಕೊಳ್ಳುತ್ತನಷ್ಟೆ. ಅಲ್ಲವೇ !? ಇದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಅರಿತು ನಡೆದಾಗ ಬದುಕು ಸುಂದರ. ಇಲ್ಲದಿದ್ದರೆ ಕಬ್ಬು ಗಬ್ಬು ಎನಿಸುವಂತೆಯೂ , ಒಬ್ಬಟ್ಟು ಹೊಟ್ಟೆಯುಬ್ಬರಕ್ಕೆ ಕಾರಣವಾದಂತೆಯೂ ಬದುಕಾಗುತ್ತದೆ. ಯಾವುದೂ ಅತಿಯಾಗಬಾರದು. ಅತಿಯಾದರೆ ಋಣಾತ್ಮಕವಾಗಿ ಪರಿಣಮಿಸುತ್ತದೆ. ಆದರೆ ಅತಿಯಾದಷ್ಟೂ ಸಂತೋಷವನ್ನು ಕೊಡುವುದು ಭಗವಂತನ ನಾಮಸ್ಮರಣೆ ಮಾತ್ರ ! ಇದು ಅನುಭವಿಸುವವರಿಗೆ ಮಾತ್ರ ವೇದ್ಯವಾಗುತ್ತದೆ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021