ಕಪ್ಪೇನು ಬಿಳುಪೇನು ಸರ್ವ ಸುಂದರವಿಲ್ಲಿ
ಒಪ್ಪು ಜಗದೊಳಗೆಲ್ಲ ತನ್ನ ತನ್ನಂತೆ
ಒಪ್ಪಗೈದವನ ಕಾಣ್ ಬೆಪ್ಪನಂತಾಡದಿರು
ಕಪ್ಪೆ ನಿನ್ನಾತ್ಮ ಪೇಳ್ ಜಾಣಮೂರ್ಖ//
ಸ್ನೇಹಿತರೇ , ಹಾಗೇ ಈ ಜಗತ್ತನ್ನು ಗಮನಿಸಿ ಈ ಸೃಷ್ಟಿಯಲ್ಲಿ ಯಾವುದೂ ಕುರೂಪವೂ ಅಲ್ಲ , ಸುರೂಪವೂ ಅಲ್ಲ. ಅದೆಲ್ಲಾ ನಾವು ಮಾಡಿಕೊಂಡಿರೋದಷ್ಟೆ. ಕಪ್ಪು , ಬಿಳುಪು ಹೀಗೇ ಏನೇನೋ ತರತಮ ಭಾವನೆಗಳಿವೆಯಲ್ಲ ಇವೆಲ್ಲಾ ಸೃಷ್ಟಿಯಾದದ್ದು ಮನುಷ್ಯನಿಂದಷ್ಟೆ ! ಓ ಗೆಳೆಯಾ ನೀನು ಯಾವುದನ್ನು ಪ್ರೇಮದಿಂದ ನೋಡುವೆಯೋ ಅದು ಸುಂದರವಾಗಿ ಕಾಣುತ್ತದೆ. ನಿಮ್ಮ ಭಾವವು ನೋಡುವ ವಸ್ತುವನ್ನು ಮತ್ತಷ್ಟು ಸುಂದರವಾಗಿಸುತ್ತೆ ಅಷ್ಟೆ. ಈ ಸಮಸ್ತ ಸುಂದರ ಸೃಷ್ಟಿಯನ್ನುಸೃಷ್ಟಿಸಿದ ಕಲಾಕಾರನ ಮನಸ್ಸು ಹೇಗಿರಬಹುದು ! ಒಮ್ಮೆ ಯೋಚಿಸಯ್ಯಾ ಗೆಳೆಯಾ ! ಸುಮ್ಮನೇಕೆ ಮತಿಭ್ರಾಂತಿ !? ಇಷ್ಟೆಲ್ಲಾ ಯೋಚಿಸುವ ನಮ್ಮ ಆತ್ಮ ಕುರೂಪವೇ ?! ಕಪ್ಪೇನು !? ಈ ಪ್ರಶ್ನೆಗಳಿಗೆಲ್ಲಾ ಉತ್ತರಿಸಲಾದೀತೆ !? ಅದಕ್ಕೆ ನಾವೇನು ಮಾಡಬೇಕೆಂದರೆ ಅತಿಬುದ್ಧಿವಂತರಂತೆ ದೂರುವುದನ್ನು ಬಿಟ್ಟು ಅನಂತ ಸೃಷ್ಟಿಯನ್ನು ಆಸ್ವಾದಿಸುತ್ತಾ , ಆನಂದಿಸುತ್ತಾ ಕಳೆಯಬೇಕು. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021