ಬೆಳಕೆ ಬೆಳಕಿಗೆ ಸಾಟಿ ಅರಿವಿಂಗೆ ಅರಿವಯ್ಯ !
ತೊಳಗಿ ಬೆಳಗಲುಮುಂಟೆ ಮುಳುಗದಿರೆ ಬಾಳು !
ಮುಳುಗೇಳು ತಿಳುವಿನಾ ತಳಕಿಳಿದು ತಡಕಾಡು
ಕಳೆದುದಿಹುದಲ್ಲಿ ಕಾಣ್ ಜಾಣಮೂರ್ಖ//
ಬೆಳಕಿಗೆ ಬೆಳಕೇ ಸಾಟಿ ! ಅರಿವಿಗೆ ಅರಿವೇ ಸಾಟಿ ! ಅಬ್ಬಾ ! ಎಂತಹಾ ದೈವಸೃಷ್ಟಿ !! ಇದರೊಟ್ಟಿಗೆ ಈ ಬಾಳು , ಬದುಕು ! ಏನಿದರ ಉದ್ದೇಶ ? ಏನಿದರ ಗುಟ್ಟು ? ಎಲ್ಲಿಂದ ಬಂದೆವು ? ಹೊರಟುದಾದರೂ ಎಲ್ಲಿಗೆ ? ಬರೀ ಪ್ರಶ್ನೆಗಳೇ!! ಈ ಪ್ರಶ್ನೆಗಳಿಗೆಲ್ಲಾ ಉತ್ತರ ಬೇಕೆಂದರೆ ಈ ಬದುಕಲ್ಲಿ ಮುಳುಗಬೇಕು , ಅನುಭವಿಸಬೇಕು , ತಿಳುವಿನ ತಳಕ್ಕಿಳಿದು ತಡಕಾಡಬೇಕು. ಆಗ ಸೀಗುತ್ತೆ ನೋಡಿ ನಾವು ಕಳೆದುಕೊಂಡು ಹುಡುಕುತ್ತಾ ಇರೋದು. ಆದ್ರೆ ಏನು ಹುಡುಕುತ್ತಿದ್ದೇವೆಂಬ ಅರಿವು ನಮಗಿರಬೇಕಷ್ಟೆ. ಇಲ್ಲದಿದ್ದರೆ ಕುರುಡರಿಗೆ ಆನೆಯ ಮೈದಡವಿ ಹೇಗಿದೆ ಅಂತ ಹೇಳಿ ಎಂದಂತಾಗುತ್ತದಷ್ಟೆ ! ಏನನ್ನು ಹುಡುಕಬೇಕು ಅಂತ ನೀವೇ ನಿರ್ಧರಿಸಿ ಗೆಳೆಯರೇ ! ಏಕೆಂದರೆ ಅವರವರ ಬದುಕಿನ ಅನ್ವೇಷಕರು ಅವರವರೇ ಅಲ್ಲವೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021