ಗಾಳಿಗೆ ಹಾರಿ ಬಂದ ಕೆಲವು
ಹಕ್ಕಿ ಕಚ್ಚಿ ತಂದ ಇನ್ನು ಕೆಲವು
ಜೊತೆ ಜೊತೆಗೆ ಬೆಳೆದಿದ್ದವು
ಆ ಕಾನನದಿ!
ಸಂತಸವ ಹಂಚಿಕೊಂಡು
ಬೇಸರವ ಚರ್ಚಿಸಿಕೊಂಡು
ಆಟವನಾಡಿಕೊಂಡು
ಕಳೆದಿದ್ದವು ಹಲವು ವರ್ಷಗಳ!
ತೀರದಾಸೆಯ ಅರಸುತ್ತಲೋ
ಅನಿವಾರ್ಯತೆಯ ಕಾರಣದಿಂದಲೋ
ಚದುರಿದ್ದವು ವಿಸ್ತಾರಕ್ಕೆ
ಕೆಲವು ಸಪ್ತ ಸಾಗರದಾಚೆಗೂ!
ಆದರದೇ ದಟ್ಟ ಹಸಿರು
ಅಗಲಕ್ಕೆ ಚಾಚಿದ್ದ ಕೊಂಬೆಗಳು
ಮುಗ್ಧ ಮೊಗ್ಗುಗಳು
ಆಳಕ್ಕಿಳಿದ ಬೇರುಗಳು!
ಬೆಳೆದೆತ್ತರ
ಕಾಂಡದಗಲ
ಇದೆಯೇ
ಲೆಕ್ಕಕ್ಕೆ?!
Latest posts by rmakkithaya (see all)
- ಸ್ಪೂರ್ತಿ! - July 12, 2021
- ಛಲ! - May 9, 2021
- ಮೊಗ್ಗಾಗುವ ಆಸೆ! - April 11, 2021