ಮುಖವಾಡವಿಲ್ಲ!
ಕ್ರತಕತೆಯ ಸುಳಿವಿಲ್ಲ
ಹೊಗಳುವವರ, ತೆಗಳುವವರ ಪರಾಮರಿಕೆಯಿಲ್ಲ
ಸಮಾನಸ್ಕರ ಒತ್ತಡವಿಲ್ಲ
ಮುಖವಾಡವಿಲ್ಲ!
ಮದುಮಗಳಂತೆ ಸಿಂಗರಿಸಿ
ಚಿಗುರೊಡೆದು
ಮೊಗ್ಗು, ಹೂವರಳಿಸಿ
ವಸಂತನ ಸ್ವಾಗತಿಸುತ್ತ!
ಕಾಯಿ, ಹಣ್ಣು ಬೆಳೆಸಿ
ಪ್ರಾಣಿ, ಪಕ್ಷಿ ಸಂಕುಲಕೆ ತಿನಿಸಿ
ಮುಂದಿನ ಜನಾಂಗಕ್ಕೆ ಪಂಚಾಗವಿಟ್ಟು
ಗ್ರೀಷ್ಮನ ಸ್ವಾಗತಿಸುತ್ತ!
ಹಿಂಜರಿಕೆಯಿಲ್ಲ, ಸಂದಿಗ್ಧತೆಯಿಲ್ಲ
ಮುಖವಾಡವಿಲ್ಲ!
ಮಳೆಯ ಹೊಡೆತ
ಗಾಳಿಯ ಆರ್ಭಟೆ
ಸಿಡಿಲು, ಗುಡುಗುಗಳಿಂದ
ವರ್ಷನ ಸ್ವಾಗತಿಸುತ್ತ!
ತನ್ನ ಅಂಟಿ ಬೆಳೆದ
ಎಲೆಯ ಸಂಬಂಧವನ್ನೇ ಕಳೆದುಕೊಂಡು
ಕಷ್ಟ ಸಂಕೋಲೆಗೆ ತಯಾರಾಗಿ
ಶರಧನ ಸ್ವಾಗತಿಸುತ್ತ!
ಬದಲಾವಣೆಯ ಹೆದರಿಕೆಯಿಲ್ಲ
ಮುಖವಾಡವಿಲ್ಲ!
Latest posts by rmakkithaya (see all)
- ಸ್ಪೂರ್ತಿ! - July 12, 2021
- ಛಲ! - May 9, 2021
- ಮೊಗ್ಗಾಗುವ ಆಸೆ! - April 11, 2021