ನಿತ್ಯೋತ್ಸವ!
ಅದೇ ಉಲ್ಲಾಸ ಅದೇ ಸಡಗರ
ಭವ್ಯ ನೆನಪಿನಂಗಳದ
ಪ್ರತಿ ಹೆಜ್ಜೆಯಲಿ
ಪ್ರತಿ ಪುಟದಲಿ!
ಮೊಳಕೆ ಒಡೆದು
ಎರಡೆಲೆ ಒಡೆದ ದಿನ
ಬರೇ
ಮುಸುಕು ನೆನಪು
ಹರಿದ ನೀರು
ಬೀಸಿದ ಗಾಳಿ
ವಿಸ್ತರಿಸಿದ ಕೊಂಬೆ
ನೀಡಿತ್ತು
ಯೌವನದ ಮದ
ಬಿರುಗಾಳಿ
ಭೋರ್ಗೆರೆವ ಮಳೆ
ಬೇಸಿಗೆಯ ಸುಡು ಬಿಸಿಲು
ನೀಡಿತ್ತು
ಕಷ್ಟ ಸಂಕೋಲೆಯ ರುಚಿ
ಅರಳಿದ ಹೂವು
ಪುಟಿದೆದ್ದ ಮಿಡಿ
ಅರಿವಾಗಿಸಿತ್ತು
ಬಿರುಗಾಳಿಯ ಹೊಡೆತ
ಬರೇ ಕ್ಷಣಿಕವೆಂದು
ಅದೇ ಉಲ್ಲಾಸ ಅದೇ ಸಡಗರ
ಭವ್ಯ ನೆನಪಿನಂಗಳದಿ!
ದೊರೆತಿತ್ತು ಉಲ್ಲಾಸ
ಕೊಟ್ಟ ನೆರಳಿನಿಂದ, ತಂಗಾಳಿಯಿಂದ
ಪುಟಿದೆದ್ದ ಚಿಗುರಿನಿಂದ
ಬೆಳೆದ ಕೊಂಬೆಯಿಂದ
ದೊರೆತಿತ್ತು ಸಡಗರ
ಬಂದೆರಗಿದ ಪಕ್ಷಿ ಸಂಕುಲದಿಂದ
ತಿಂದುಂಡ ಅಳಿಲ ಗುಂಪಿನಿಂದ
ಹತ್ತಿ ಆಡಿದ ಜೀವ ಜಂಗುಳಿಯಿಂದ
ಅದೇ ಉಲ್ಲಾಸ ಅದೇ ಸಡಗರ
ಭವ್ಯ ನೆನಪಿನಂಗಳದಿ!
Latest posts by rmakkithaya (see all)
- ಸ್ಪೂರ್ತಿ! - July 12, 2021
- ಛಲ! - May 9, 2021
- ಮೊಗ್ಗಾಗುವ ಆಸೆ! - April 11, 2021