ವಿಧಿ!
ಅಚ್ಚ ಆಗಸದಿ
ಬಾಲ ಸೂರ್ಯ ಅಂಬೆಗಾಲಿಕ್ಕಿ
ಆಗಿರಲಿಲ್ಲ
ಹೆಚ್ಚೇನು ಸಮಯ!
ಚಿಗುರೊಡೆದು
ಕವಲೊಡೆದು
ನಿಂತಿತ್ತು ಆ ಸಸಿ
ಭುವಿಯ ಆಳಕ್ಕೆ
ಬೇರ ಬಿಟ್ಟು
ಆಧರಿಸಿ ನಿಲ್ಲುವ ಯತ್ನದಲ್ಲಿ!
ಆಗಿರಬೇಕು ಅರಿವು
ನೀರಿನಾಳದ
ಗಾಳಿಯ ವೇಗದ
ಟೊಂಗೆಯೊಡೆದು
ವಿಸ್ತಾರವಾಗಿ ಕೈ ಚಾಚಿ
ನಿಂತಿರುವ ರೀತಿ ನೋಡಿ!
ವಿಧಿ
ವಿಪರ್ಯಾಸ
ಅಷ್ಟರಲ್ಲಿ …
ನಿಷ್ಠುರ ಮನಸ್ಸಿನ
ಕರಿ ಕಾರ್ಮೋಡ
ಕಠೋರ ಹದಯದ
ಕುಳಿರ್ಗಾಳಿ
ಭಾವನೆ ರಹಿತ
ಭೋರ್ಗರೆವ ಮಳೆ
ವಾಲಿತ್ತು
ನಲುಗಿತ್ತು
ತತ್ತರಿಸಿತ್ತು
ಆಗಷ್ಟೆ ಆಧರಿಸಿ ನಿಂತ
ಎಳೆ ಮರ!
ಭುವಿಗೆ ಒರಗಿತ್ತು
ಪ್ರಕತಿ ಕೋಪದಿ
ಹೂವು ಹಣ್ಣು ಬಿಡುವ
ಮೊದಲೆ!
ಕಾರ್ಮೋಡ ಮುಚ್ಚಿತ್ತು
ಬಾನಂಗಳವನ್ನು
ಬಾಲ ಸೂರ್ಯ ನಲಿದಾಡುವ
ಮೊದಲೆ!
Latest posts by rmakkithaya (see all)
- ಸ್ಪೂರ್ತಿ! - July 12, 2021
- ಛಲ! - May 9, 2021
- ಮೊಗ್ಗಾಗುವ ಆಸೆ! - April 11, 2021