ಶೂನ್ಯದೊಳು ಶೂನ್ಯನನು ಅರಸಿ ಶೂನ್ಯನ ಭಜಿಸಿ
ಶೂನ್ಯನನು ಕಂಡು ಶೂನ್ಯತ್ತ್ವವನು ಹೊಂದಿ
ಶೂನ್ಯಂಗೆ ಶೂನ್ಯವನೆ ಶೂನ್ಯಭಾವದೊಳಿತ್ತು
ಶೂನ್ಯನಾಗೆದ್ದೇಳೊ ಜಾಣಮೂರ್ಖ//
ಅಯ್ಯೋ , ಶೂನ್ಯ, ಶೂನ್ಯತ್ವ , ಶೂನ್ಯಭಾವ ಇತ್ಯಾದಿಗಳೆಲ್ಲಾ ಇಂದು ಬರೀ ತೋರಿಕೆಯ ಮಾತುಗಳಾಗುತ್ತಿವೆ! ಕಾಲಮಹಿಮೆ, ಕಾಲ ವಿಪರ್ಯಾಸ ಏನಾದರೂ ಕರೆಯಿರಿ. ಆದರೆ ಇದು ಸತ್ಯವೇ ! ಶೂನ್ಯನನ್ನು ಶೂನ್ಯದಲ್ಲೇ ಹುಡುಕಿ , ಶೂನ್ಯನನ್ನು ಭಜಿಸಿ , ಶೂನ್ಯತ್ವವನ್ನು ಹೊಂದಿ , ಶೂನ್ಯನನ್ನು ಕಂಡು , ಶೂನ್ಯಭಾವದಲ್ಲಿ ಶೂನ್ಯವನ್ನಿತ್ತು ನಾವೂ ಶೂನ್ಯದಲ್ಲಿ ಒಂದಾಗಿಬಿಡುವ ಮನೋಭಾವ ನಮ್ಮದಾಗಬೇಕು. ಹೀಗೆ ಶೂನ್ಯತ್ತ್ವಕ್ಕೇರುವ ವರೆಗೆ ನಮಗೆ ಶೂನ್ಯತತ್ತ್ವ ಮರೀಚಿಕೆಯೇ ಸರಿ. ದ್ರಾಕ್ಷಿ ಹುಳಿಯೆಂಬ ತತ್ತ್ವದಂತೆ. ತತ್ತ್ವ ಹೇಳೋ ಬಹಳಷ್ಟು ಜನರನ್ನು ನಾವು ನೋಡುತ್ತೇವೆ. ಎಲ್ಲರ ಪಾಡೂ ಇದೇ. ಅದೇನೋ ಅನ್ನುವರಲ್ಲ “ವೇದಾಂತ ಹೇಳೋಕೆ……..” ಹಾಗೆ ! ನೀವು ಏನೇ ಹೇಳಿ ಗೆಳೆಯರೇ ಡಂಭ ಎಂದಿದ್ದರೂ ಡಂಭವೇ ಬರೀ ಆರ್ಭಟ ! ಸತ್ಯ ಬೂದಿ ಮುಚ್ಚಿದ ಕೆಂಡ ! ಆದರೆ ಇಂದು ಡಂಭಕ್ಕೇ ಬೆಲೆ ! * ತಸ್ಮೈ ನಮಃ* ಆದರೆ ನಿಜವಾಗಿ ಶೂನ್ಯರಾಗಿ ಶೂನ್ಯನನ್ನು ಕಂಡಾಗ ಬಾಳು ಧನ್ಯ. ಅಲ್ಲಿಯ ನಾವು ಸಿಂಬಳದ ನೊಣಗಳೆ. ಅದು ಈ ಲೌಕಿದ ಕರಾಳ ನೆರಳಿನಡಿಯಲ್ಲಿ ನಮಗರ್ಥವಾಗುತ್ತಿಲ್ಲ ಅಷ್ಟೆ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021