ಕಣ್ಮುಚ್ಚಿ ಜಗವ ನಾ ನೊಳ್ಪೆನೆನ್ನಲುಮಳವೆ ?
ಕಣ್ಮುಚ್ಚಿ ಕತ್ತಲೆನೆ ದೈವ ತಾ ಹೊಣೆಯೆ ?
ಕಣ್ಣತೆರೆ ಜಗಕೆಲ್ಲ ಕಣ್ಣಾಗಿ ಕಾಯ್ದರಿಹ
ರಣ್ಣ ಕಣ್ತೆರೆಯೇಳೊ ಜಾಣಮೂರ್ಖ//
ಕಣ್ಮುಚ್ಚಿಕೊಂಡು ಜಗತ್ತನ್ನು ನೋಡುತ್ತೇನೆ ಎನ್ನುವ ಹುಂಬತನವೇಕೆ !? ಅದು ಸಾಧ್ಯವೇ ? ಕಣ್ಣನ್ನು ಮುಚ್ಚಿಕೊಂಡು ಜಗತ್ತಿನಲ್ಲಿ ಏನೂ ಸಾರವೇ ಇಲ್ಲ ! ಸುತ್ತಲೂ ಅಂಧಕಾರವಿದೆ ! ಎಂದರೆ ಅದಕ್ಕೆ ದೈವ ಹೊಣೆಯೇ !? ನೋಡಲು ಕಣ್ಣು ಕೊಟ್ಟ ಮೇಲೆ ನೋಡುವುದು ನಮ್ಮ ಕೆಲಸ. ನೋಡಬೇಕು ! ಈ ಅದ್ಭುತ ಜಗತ್ತನ್ನು ನೋಡಿ ಆನಂದಿಸಬೇಕು! ತಮ್ಮ ಅರಿವಿನ ಕಣ್ಣನ್ನು ತೆರೆದು ಜಗತ್ತಿಗೆ ದಾರಿ ತೋರಿದ ದಾಸರು , ಶರಣರು, ಸಂತರು ಮಹಾನುಭಾವರು ಹಲವರಿದ್ದಾರೆ ಇಲ್ಲಿ . ಅಂತಹವರನ್ನು ಆದರ್ಶವಾಗಿಟ್ಟುಕೊಂಡು ಕಣ್ತೆರೆದು ಬದುಕಬೇಕು. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021