ಮೆಳೆಯ ಮುಳ್ಪೊರೆದು ಹೂ ಧನ್ಯೆ ತಾನಾಗಿ ಮಿಗೆ
ಕಳಕಳಿಸಿ ಜಗವನ್ನೆ ಸಗ್ಗವಾಗಿಪಳೈ
ಮೆಳೆಮುಳ್ಳು ಹೂವೆಲ್ಲ ತಮ್ಮ ಕರ್ಮದೊಳಿರಲು
ಇಳೆ ಧನ್ಯಳೈ ನಮಿಸೊ ಜಾಣಮೂರ್ಖ //
ಒಂದು ಮುಳ್ಳ ಮೆಳೆ, ಅದರ ಮಧ್ಯೆ ಒಂದು ಸುಂದರವಾದ ಹೂವು ! ಸುಗಂಧವನ್ನು ಚಲ್ಲುತ್ತಿದೆ, ಯಾರೂ ಹೂವನ್ನು ಮುಟ್ಟಲಾರದಷ್ಟು ಮುಳ್ಳಿದೆ. ಮುಳ್ಳು ಹೂವನ್ನು ರಕ್ಷಿಸುತ್ತಿದೆ ! ಹೂವು ಜಗತ್ತನ್ನೇ ಸ್ವರ್ಗವಾಗಿಸುತ್ತಿದೆ. ಅವರವರಿಗೆ ಅವರವರದ್ದೇ ಆದ ಕೆಲಸಗಳು. ನಿಶ್ಶಬ್ದವಾಗಿ ಕರ್ಮವೆಸಗುತ್ತಿವೆ ! ಸದ್ದು ಮಾಡದೆ ಬದುಕಲ್ಲಿ ಗೆದ್ದಿವೆ ! ನಾವು ಸಿಕ್ಕಾಪಟ್ಟೆ ಸದ್ದು ಮಾಡಿ ಸೋತಿದ್ದೇವೆ ! ಬದುಕಿನ ಆಂತರ್ಯದಲ್ಲಿ ಸೇರಿ ದಿವ್ಯ , ಭವ್ಯ ಸಂದೇಶವನ್ನು ಎಡೆಬಿಡದೆ ಸಾರುತ್ತಿರುವ ಈ ಇಳೆಯಮ್ಮ , ಭೂತಾಯಿ ಧನ್ಯಳು ಕಣಯ್ಯ ಗೆಳೆಯ. ತಾಯ್ಮಡಿಲ ಮಕ್ಕಳಾಗಿ ಈ ಸಂದೇಶಗಳನ್ನರಿತು , ಗ್ರಹಿಸಿ ನಡೆಯಬೇಕಾದದ್ದು ನಮ್ಮ ಕರ್ತವ್ಯ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021