ಎದ್ದನಾ ಸಿದ್ಧಾರ್ಥನೆದ್ದೆ ಬಿಟ್ಟನು ಬಾಳ ಸಿದ್ಧಿಯೊಳಗದ್ದಿದನು ಬುದ್ಧ ತಾನಾಗಿ
ಬುದ್ಧಿವಂತರು ಜಗದಿ ಎದ್ದಿರುವ ಬೆಮೆಯೊಳಗೆ
ಬಿದ್ದು ಬಳಲುವರಿಹದಿ ಜಾಣಮೂರ್ಖ //
ಅಬ್ಬಾ ! ಅಂದು ಒಂದೇ ಮನಸ್ಸಿನಿಂತ ಸುಂದರಳೂ , ಪತಿವ್ರತೆಯೂ ಆದ ತನ್ನ ಹೆಂಡತಿ ಯಶೋಧರೆ , ಮಗು ರಾಹುಲ , ತಂದೆತಾಯಿಗಳನ್ನು ಬಿಟ್ಟು ಕಾಡಿಗೆ ನಡೆದೇ ಬಿಟ್ಟ ಸಿದ್ಧಾರ್ಥ ! ಜಗಕ್ಕೆ ಶಾಂತಿಯ ಮಾರ್ಗವನ್ನು ತೋರಿಸಲೋಸುಗ ! ಬದುಕಿನಲ್ಲಿ ಸಿದ್ಧಪುರುಷನಾಗಿ ಸಿದ್ಧಿಯ ಮೇರುವಾಗಿಬಿಟ್ಟ ! ಬುದ್ಧನಾಗಿಬಿಟ್ಟ ! ಆದರೆ ಇಂದು ಕ್ಷಣಿಕವಾದ ಲೌಕಿಕ ಸಂಪತ್ತಿನ ಜೊತೆ ಮೋಜಿನ ಜೀವನ ನಡೆಸೋದನ್ನೇ ಸಿದ್ಧಿ ಎಂಬ ಭ್ರಮೆಯಲ್ಲಿ ಜನ ಬಹಳ ಬುದ್ಧಿವಂತರಾಗ ಹೊರಟಿರುವುದು ಬಹು ದುರದೃಷ್ಟಕರ ಸಂಗತಿ ! ಅವರ ದೃಷ್ಟಿಯಲ್ಲಿ ಬುದ್ಧನೊಬ್ಬ ದಡ್ಡ !!! ಬುದ್ಧಿವಂತರಾಗೋದಕ್ಕೆ ಅಡ್ಡಿಯಿಲ್ಲ ! ಆದರೆ ಆ ಭರದಲ್ಲಿ ಮನುಷ್ಯತ್ವವನ್ನೇ ಬಿಟ್ಟು ಬದುಕುವ ಹೀನ ಪ್ರವೃತ್ತಿಗಳು ತೋರುತ್ತಿರುವುದು ದುರದೃಷ್ಟಕರ ! ನಾವೆಲ್ಲಿ ಬಿದ್ದಿದ್ದೇವೆ ಎನ್ನುವುದು ಅವರಿಗೆ ಗೊತ್ತಾಗೋದೇ ಇಲ್ಲ ! ಅಷ್ಟು ಅಂಧಕಾರ ತುಂಬಿರುತ್ತೆ ! ಒಂದು ತರಹೆಯ ಭ್ರಮೆಯಲ್ಲಿಯೇ ತಮ್ಮ ಬದುಕನ್ನು ಅವರು ಕಳೆದು ಬಿಡುತ್ತಾರೆ. ಗುರುಗಳು ಎಚ್ಚರಿಕೆ ನೀಡಿದರೂ ಸಹ ಎಚ್ಚೆತ್ತುಕೊಳ್ಳದಿದ್ದರೆ ಅದಕ್ಕೆ ಹೊಣೆ ಯಾರು !? ಅಲ್ಲವೇ ಗೆಳೆಯರೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021