ಅಳುವಿನೊಂದಿಗೆ ಹುಟ್ಟಿ ಅತ್ತು ನಕ್ಕೀ ಬದುಕ
ನೆಳೆವ ನಡುವಲಿ ನೋವನೀವೇಕೆ ಮರುಳೆ
ಅಳುವಿತ್ತರಳುವಿಹುದು ನಗಿಸು ನಗುವಿಹುದಯ್ಯ
ಕಳಿಸು ಮಾಗಿಸು ಮನವ ಜಾಣಮೂರ್ಖ //
ಅಳುವಿನೊಂದಿಗೆ ನಮ್ಮ ಜೀವನದ ಕರ್ಮಪಥ ಆರಂಭವಾಗುತ್ತದೆ. ಮತ್ತೆ ಬಾಳಿನುದ್ದಕ್ಕೂ ಅಳುತ್ತೇವೆ ನಗುತ್ತೇವೆ ! ನಗಿಸುತ್ತೇವೆ ! ಅಳಿಸುತ್ತೇವೆ. ಏನೋ ಬಿಡಿ . ಹೀಗೇ ಸಾಗುತ್ತದೆ ನಮ್ಮ ಜೀವನ. ಆದರೆ ಒಂದನ್ನಂತೂ ನಾವು ಯೋಚಿಸಬೇಕು. ಚಿರವಲ್ಲದ ಈ ಬದುಕಲ್ಲಿ ಇತರರಿಗೆ ನೋವನ್ನೇಕೆ ಕೊಡಬೇಕು !? ನೋಡಯ್ಯಾ ಗೆಳೆಯ ನೀನು ನೋವಿತ್ತರೆ ನೋವು , ನಲಿವಿತ್ತರೆ ನಲಿವು ! ನೀನು ಜಗತ್ತಿನಲ್ಲಿ ಪ್ರೀತಿಯನ್ನು ಬಿತ್ತಿದರೆ ಪ್ರೀತಿ , ದ್ವೇಷವನ್ನು ಬಿತ್ತಿದರೆ ದ್ವೇಷ . ಇಷ್ಟೆ ! ಇನ್ನೇನೂ ಇಲ್ಲ. ಇದು ಉಪದೇಶವಂತೂ ಅಲ್ಲ! ಇದು ಸತ್ಯ ಕಣಯ್ಯ ಗೆಳೆಯ. ಸತ್ಯವೆಂದಿಗೂ ಬೆಂಕಿ , ಸಿಡಿಲು . ತನ್ನ ಬಿಟ್ಟವನ ಅದು ಸುಡದೇ ಬಿಡದು. ಆದ್ದರಿಂದ ನಿನ್ನ ಮನಸ್ಸನ್ನು ಸ್ವಲ್ಪ ಕಳಿಸು ! ಮಾಗಿಸು ! ಆಮೇಲೆ ಎಲ್ಲಾ ತಾನಾಗೇ ಅರ್ಥವಾಗುತ್ತದೆ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021