ಹೂವೊಂದ ಭಾವದೊಳು ನೋಡು ಆಘ್ರಾಣಿಸೈ
ಭಾವಿಸೈ ಭಗವಂತನಿತ್ತ ಸಂತಸವ !
ಹೂವಿನೀ ಸೊಬಗು ಚಿರವಿರದೆಂಬ ಅರಿವಿರಲಿ !
ಭಾವ ವೈರಾಗ್ಯಮದು ಜಾಣಮೂರ್ಖ//
ಹೂವುಗಳನ್ನು ನೋಡಿದರೆ ಯಾರಿಗೆ ತಾನೆ ಸಂತೋಷವಾಗುವುದಿಲ್ಲ !? ಪ್ರೇಮದಿಂದ, ಭಾವಪೂರ್ಣವಾಗಿ ಅದು ಭಗವಂತ ನೀಡಿದ ಸಂತಸವೆಂಬಂತೆ ಸ್ವೀಕರಿಸಿ ಆನಂದಿಸಬೇಕು. ಜೊತೆಗೆ ಹೂವಿನ ಆ ಸೊಬಗು , ಸೌಂದರ್ಯ, ಸೌಗಂಧ, ಮಕರಂದ ಇತ್ಯಾದಿಗಳೆಲ್ಲವೂ ಚಿರವಲ್ಲ , ಆ ಹೂವು ಬಾಡಿ ಹೋಗುತ್ತದೆಂಬ ಅರಿವೂ ಸಹ ನಮ್ಮಲ್ಲಿರಬೇಕು. ಅದಿಲ್ಲದಿದ್ದರೆ ನಾವನುಭವಿಸಿದ ಸಂತೋಷವೂ ಹೂವಿನೊಡನೆಯೇ ಬಾಡಿಹೋಗುತ್ತದೆ. ಇದನ್ನೇ ಭಾವವೈರಾಗ್ಯ ಎನ್ನುವುದು. ಇಂತಹುದೊಂದು ಭಾವ ವೈರಾಗ್ಯ ನಮ್ಮ ಅಲೌಕಿಕ ಆನಂದಕ್ಕೆ ಕಾರಣವಾಗುತ್ತದೆ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021