ತೂಕು ತೊಟ್ಟಿಲ ಗೂಡೊಳಾಡುವಾ ಹಕ್ಕಿಗಿಂ
ಸಾಕು ಹಕ್ಕಿಯ ಹಿಗ್ಗು ಮಿಗಿಲೇನು ಹೇಳು !
ಸಾಕಿದರೆ ಪೋಗಲೇಳ್ಕೊಲ್ಲುವುದು ತರವೇನು?
ನೂಕಾಚೆ ಕೃತ್ರಿಮವ ಜಾಣಮೂರ್ಖ //
ಎತ್ತರದ ಮರದಲ್ಲಿ ಉಯ್ಯಾಲೆಯಂತೆ ತೂಗಾಡುವ ಗೂಡಿನಲ್ಲಿ ಆಡುತ್ತಾ , ಕೆಲವೊಮ್ಮೆ ಯೋಗಿಯಂತೆ ಆಗಸದೆಡೆಗೆ ದಿಟ್ಟಿ ಬೀರುವ ಹಕ್ಕಿಯ ಆನಂದಕ್ಕೂ , ಪಂಜರದ ಪಕ್ಷಿಯ ಆನಂದಕ್ಕೂ ವ್ಯತ್ಯಾಸವಿಲ್ಲವೇನು !? ಸ್ವತಂತ್ರ ಹಕ್ಕಿ ಸ್ವತಂತ್ರ ಹಕ್ಕಿಯೇ , ಪಂಜರದ ಪಕ್ಷಿ ಪಂಜರದ ಪಕ್ಷಿಯೇ ! ಅದರ ಸಂತೋಷ ಅದರದ್ದು , ಇದರ ಸಂತೋಷ ಇದರದ್ದು. ಸಾಕಿದರೆ ಹೋಗಲಿ ಬಿಡಿ, ಅದನ್ನು ಕೊಂದು ತಿನ್ನುವ ಮಾನವನ ಸಂತೋಷವು ಮಾತ್ರ ಎಂತಹಾ ಹೀನಾಯವಲ್ಲವೇ ? ಇಂತಹಾ ಕೃತ್ರಿಮವಾದರೂ ಏಕೆ !? ನಾವು ಮನುಷ್ಯರು. ೮೪ ಲಕ್ಷ ಜಿವರಾಶಿಗಳಲ್ಲೆಲ್ಲಾ ಮಾನವ ಜನ್ಮವೇ ಬಹು ಶ್ರೇಷ್ಠವಾದದ್ದು ! ಇದನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಇಂತಹಾ ಕೃತ್ರಿಮಗಳೆಲ್ಲಾ ಏಕೆ . ವಿವೇಕಿಗಳಾಗಿ, ದಯಾಪರರಾಗಿ ಈ ನಿಟ್ಟಿನಲ್ಲಿ ಚಿಂತಿಸದಿದ್ದರೆ ಹೇಗಯ್ಯಾ ಗೆಳೆಯಾ !? ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021