ತಂಗಾಳಿ ತೀಡುವೊಲು ಮುಂಗಾರು ಪೊರೆವವೊಲು
ಬಂಗಾರ ಬೆಳೆಬಂದು ಬಂಗ ತೀರ್ವವೊಲು
ಹೊಂಗನಸ ಸಲಿಸುವೀ ತಾಯ ಚಾಗದವೊಲುವೆ
ಇಂಗದಿರಲೈ ಭಾವ ಜಾಣಮೂರ್ಖ //
ಪ್ರಕೃತಿ ಮಾತೆಗೆ ನಾವೆಷ್ಟು ಕೃತಜ್ಞರಾಗಿದ್ದರೂ ಸಾಲದು. ಬಳಲಿದಾಗ ತಂಗಾಳಿ , ಒಡಲ ಪೊರೆಯಲು , ಬಾಳ ಬೆಳಗಲು ಮುಂಗಾರು , ಮುಂಗಾರಿನ ದೆಸೆಯಿಂದ ಬಂದ ಬಂಗಾರದಂತಹ ಬೆಳೆ , ತೀರಿದ ಬಂಗ ಬವಣೆಗಳು ಬದುಕಿನಲ್ಲಿ ಕಟ್ಟಿಕೊಂಡ ಹೊಂಗನಸುಗಳು ತೀರಿ ಸಂತಸವನ್ನು ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೇ ಸಲಿಸುವ ಪ್ರಕೃತಿ ಮಾತೆಯ ತ್ಯಾಗ ಗುಣಕ್ಕೆ ನಾವೇನು ಕೊಡಲು ಸಾಧ್ಯ !? ಏನಾದರೂ ಕೊಡಲೇಬೇಕಲ್ಲವೇ !? ಹಾಗಾದರೆ ಏನು ಕೊಡೋಣ ! ಏನೂ ಬೇಡ ಗೆಳೆಯರೇ ! ಆ ತಾಯಿ ಏನನ್ನೂ ಬಯಸಳು. ಆದರೆ ಸಾಧ್ಯವಾದರೆ ಅವಳ ತ್ಯಾಗ ಗುಣವನ್ನು ಅಳವಡಿಸಿಕೊಳ್ಳೋಣ. ಸ್ವಾರ್ಥವನ್ನು ಬಿಡೋಣ. ಮಾನವ ಸಹಜ ದೈವೀಕ ಭಾವಗಳು ಬತ್ತದಂತೆಯೂ , ಕೃತಕತೆಯು ನುಸುಳದಂತೆಯೂ ಎಚ್ಚರವಹಿಸಿ ಬಾಳನ್ನು ನಂದನವಾಗಿಸೋಣ. ಅಲ್ಲವೇ ಗೆಳೆಯರೇ !
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021