ಗಾಳಿಗ್ಯಾತರ ತಡೆಯೊ ಬೆಂಕಿಗ್ಯಾತರ ಬಿಸಿಯೊ
ಬಾಳಧಾಳಿಯೆ ಬುವಿಗೆ ನಮಗಷ್ಟೆ ಗೆಳೆಯ !
ತಾಳದೇಂ ಸುಳಿಯ ಜಲ ಶೂನ್ಯಕ್ಕೆ ಕೊನೆಯೇನು
ಬಾಳಿಗ್ಯಾತರ ಬವಣೆ ಜಾಣಮೂರ್ಖ//
ಪಂಚಭೂತಗಳ ದಿವ್ಯತೆಯ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ ! ಗಾಳಿಗೆ ತಡೆಯುಂಟೆ ?! ಬೆಂಕಿಯನ್ನು ಸುಡುವುದು ಯಾವುದಾದರೂ ಇದೆಯೇ !? ಭೂಮಿತಾಯಿಯ ಮೇಲೆ ಬದುಕಿನ ಧಾಳಿಯೇ !? ಅದರ ಧಾಳಿಗೆ ತುತ್ತಾಗಿರುವವರು ನಾವು ಮಾತ್ರ ! ನೀರಿಗೆ ಸುಳಿಯ ಭಯವೇನು !? ಆಕಾಶಕ್ಕೆ ಕೊನೆಯೆಂಬುದಿದೆಯೇನು !? ಆದರೆ ಈ ಪಂಚಭೂತಗಳಿಂದಾದವನೇ ತಾನು ಎಂದು ಅರಿತ ಜ್ಞಾನಿಗೆ ಈ ಬಾಳ ಬವಣೆಗಳೊಂದು ಲೆಕ್ಕವೇ !? ಬದುಕು ಅಷ್ಟೆ ! ಅದರೊಟ್ಟಿಗೆ ನಾನಿದ್ದೇನೆ ! ಅದರೊಟ್ಟಿಗೆ ಸಾಗುತ್ತಿದ್ದೇನೆ ಅಷ್ಟೆ. ಮತ್ತೇನೂ ಇಲ್ಲ. ಇನ್ನು ಬವಣೆ ! ಅದು ನಾನು ಮಾಡಿಕೊಂಡಿರೋದು ಅಷ್ಟೆ ! ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021