ಭ್ರಷ್ಠತ್ವ ಮೆರೆದು ಮಿಗೆ ಗಹಗಹಿಸುತಿದೆ ಜಗದಿ
ಶಿಷ್ಟತ್ವವಳಿದು ಬಲು ಧಾಳಿಗೈಯುತಿದೆ !
ಕಷ್ಟನಾಗದೆ ನಡೆದು ಶಿಷ್ಟರಂ ಪೊರೆಯೇಳು
ದ್ರಷ್ಟಾರ ನೀನಾಗ ಜಾಣಮೂರ್ಖ //
ಈ ಜಗತ್ತನ್ನು ನೋಡುತ್ತಾ ಇದ್ದೀರಲ್ಲಾ ! ಅದೇನು ಭ್ರಷ್ಠಾಚಾರ ! ಅದೇನು ಮೋಸ ಅಬ್ಬಬ್ಬಾ ! ಅದಂತೂ ಗಹಗಹಿಸಿ ನಗುತ್ತಲಿದೆ. ಶಿಷ್ಟಾಚಾರವೆಂಬುದು ಧೂಳಿಪಟವಾಗಿದೆ. ಭ್ರಷ್ಠತೆಯ ಕರಾಳ ಛಾಯೆಯಲ್ಲಿ ಮುಚ್ಚಿ ಹೋಗಿದೆ. ಆದರೆ ಇಂತಹಾ ಪರಿಸ್ಥಿತಿಯಲ್ಲೂ ಜೀವರಾಶಿಗಳಲ್ಲೇ ಅತ್ಯಂತ ಶ್ರೇಷ್ಠರೆನಿಸಿದ ನಾವು ಜಗತ್ತಿಗೆ ಮಾರಕರಾಗಬಾರದು. ಜಗತ್ತನ್ನು ಸರಿದಾರಿಯಲ್ಲಿ ನಡೆಸಲು ಮಾರ್ಗದರ್ಶಕರಾಗಬೇಕು. ವಿವೇಕಿಗಳಾಗಿ ಶಿಷ್ಟರನ್ನು ಪೊರೆಯಬೇಕು. ಆಗ ಇಲ್ಲಿ ನೀನೇ ಶ್ರೇಷ್ಠ ಕಣಯ್ಯ ! ಈ ಜಗತ್ತಿನಲ್ಲಿ ಇಂತಹಾ ಜೀವನಕ್ಕಿಂತ ಇನ್ನೇನು ಬೇಕು !? ಸ್ನೇಹಿತರೇ ಮಹಾತ್ಮಾ ಗಾಂಧೀಜಿಯವರು ಒಂದು ಮಾತು ಹೇಳಿದ್ದಾರೆ. ಅದೇನೆಂದರೆ ” ನಮ್ಮ ಕಣ್ಣಮುಂದೆ ನಡೆಯೋ ಅನ್ಯಾಯವನ್ನು , ತಡೆಯದೇ, ಪ್ರತಿಭಟಿಸದೇ ಸುಮ್ಮನಿದ್ದರೆ ನಾವೇ ಆ ಅನ್ಯಾಯವನ್ನು ಮಾಡಿದಂತೆಯೇ ಸರಿ ” ಅಲ್ಲವೇ ಗೆಳೆಯರೇ !
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021