ಬಂಗಾರವಿದೆಯೆಂದು ಹೊರುವುದೇನನವರತ ?
ಸಿಂಗಾರವೆನ್ನುತಲಿ ದಿನವ ಕಳೆಯುವುದೆ !?
ದಂಗಾಗಿ ಮೂಗನಂತೇಕೆ ಭಾರದ ಪಯಣ !?
ಭಂಗ ಬಿಡು ಹಗುರಾಗೊ ಜಾಣಮೂರ್ಖ //
ಈಗ ನೀವೇ ನೋಡಿ ನಾವು ಪ್ರತಿದಿನ ಪ್ರತಿಕ್ಷಣ ಹೇಗೆ ಭಂಗ ಪಡುತ್ತಿದ್ದೇವೆಂದು. ಬಂಗಾರ ಎಷ್ಟಿದ್ದರೂ ಸಾಲದು. ಹಾಗಂತ ಯಾವಾಗಲೂ ಅದನ್ನು ಹೊತ್ತು ಜೀವಿಸಲಾದೀತೆ !? ಸಿಂಗಾರ ಮಾಡಿಕೊಳ್ಳೋದರಲ್ಲೇ ದಿನಗಳೆಯಲಾದೀತೆ !? ಈ ಪ್ರಪಂಚದ ವೈಭವವನ್ನು ಕಂಡು ದಂಗಾಗಿ , ಮೂಕವಾಗಿ ಅದರ ಬಗ್ಗೆ ಚಿಂತೆಗಯ್ಯುತ್ತಲೇ ಜೀವನದ ಪಯಣವನ್ನು ಭಾರಗೊಳಿಸುವುದೇಕೆ !? ನಿರೀಕ್ಷೆ , ನಿರಾಶೆ , ವ್ಯಸನಗಳನ್ನು ಬಿಟ್ಟು ಬಿಡಯ್ಯಾ ಗೆಳೆಯಾ. ಏಕೆಂದರೆ ಇದಾವುದೂ ನಮ್ಮ ಜೊತೆ ಬರೋದಿಲ್ಲ. ಎಲ್ಲವೂ ಕ್ಷಣಿಕವಷ್ಟೆ ! ಈ ಭಂಗ ತೊರೆದು ಹಗುರಾಗಯ್ಯ ಗೆಳೆಯಾ !
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021