ಜೀಕು ಜೋಕಾಲಿಯೊಳು ಸಂತಸಂಬಡು ಕೆಳೆಯ
ಸಾಕು ಜೀಕುವ ಭರದಿ ಬಿದ್ದೀಯೆ ಜೋಕೆ !
ಜೀಕುವುದು ಜೋಕಾಲಿ ಎತ್ತರೆತ್ತರಕೇನು
ಬೀಕಲೊಳು ಬರಿಗಾಯ ಜಾಣಮೂರ್ಖ //
ಓ , ಗೆಳೆಯಾ ಜೀಕಯ್ಯಾ ಈ ಜೀವನ ಜೋಕಾಲಿಯಲ್ಲಿ ! ಜೀಕು, ಸಂತೋಷವಾಗಿರು. ಆದರೆ ಮೈಮರೆಯಬೇಡಯ್ಯಾ ಎಚ್ಚರವಾಗಿರು. ತುಂಬಾ ಜೀಕಿ ,ತಲೆತಿರುಗಿ ಬಿದ್ದೀಯೆ ಜೋಕೆ ! ಜೋಕಾಲಿಗೇನಂತೆ ಎಷ್ಟು ಎತ್ತರಕ್ಕೆ ಜೀಕಿದರೂ ಅದಕ್ಕೇನೂ ನಷ್ಟವಿಲ್ಲ. ಮೆಲ್ಲಗೋ , ಭರದಲ್ಲೋ , ಮಧ್ಯಮಗತಿಯಲ್ಲೋ ಎಲ್ಲಾ ನಿನ್ನ ಮೇಲೇ ಅವಲಂಬಿಸಿದೆಕಣಯ್ಯಾ ಗೆಳೆಯ. ಆದರೆ ಜೋರಾಗಿ ಜೀಕಿದರೆ ಕೊನೆಯಲ್ಲಿ ಉಳಿಯೋದು ಗಾಯ ಮಾತ್ರ ! ಇಂತಹಾ ಪ್ರಮಾದವೇಕೆ ! ಎಚ್ಚರಿಕೆಯಿಂದ ಜೀಕಯ್ಯ. ಬದುಕೇ ಹೀಗೆ. ಉತ್ಸಾಹ ಇಮ್ಮಡಿಯಾದರೆ ಅತಿಯಾದರೆ, ಮಿತಿಮೀರಿದರೆ ಅದರಿಂದ ದುಃಖ ತಾನೆ !
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021