ಹುಡುಕುವೆಡೆ ಬೇಡದಿಹುದೇನಿದೈ ವೈಚಿತ್ರ್ಯ !
ಹುಡುಕೆವಾವಿರುವೆಡೆಯೊಳೆಂತ ವಿಸ್ಮಯವೊ !
ಕೊಡುವನೈ ದೇವ ತಾ ಹುಡುಕುವೇನನು ಮರುಳೆ ಬಿಡು ಮನದ ಲೋಭವನು ಜಾಣಮೂರ್ಖ //
ಇದೊಂದು ದೊಡ್ಡ ವಿಚಿತ್ರ ನೋಡಿ ಈ ಬದುಕಲ್ಲಿ . ಈ ಮನೋವ್ಯಾಪಾರವೇ ತುಂಬಾ ವಿಚಿತ್ರ! ನಾವಂತೂ ನಮ್ಮ ಜೀವಿತದ ಬಹು ಭಾಗವನ್ನು ಬರೀ ಹುಡುಕೋದರಲ್ಲೇ ಕಳೆದುಬಿಡುತ್ತೇವೆ. ಏನು ಹುಡುಕ್ತಾ ಇದೀವಿ ಅಂತ ನಮಗೆ ಗೊತ್ತೇ ಇರೋಲ್ಲ ! ಆದರೂ ಹುಡುಕುತ್ತಲೇ ಇರುತ್ತೀವಿ ! ಈಗಲೂ ಬೇಕಾದರೆ ನಿಮ್ಮ ಮನಸ್ಸನ್ನು ಹಾಗೇ ಗಮನಿಸಿ ಅದು ಏನನ್ನಾದ್ರೂ ಹುಡುಕ್ತಾನೇ ಇರುತ್ತೆ. ಶಾಂತವಾಗಿ ಇರೋದೇ ಇಲ್ಲ ! ನಮಗೆ ಬೇಕಾದುದನ್ನು ಹುಡುಕುವ ಕಡೆ ಅದು ಸಿಗೋದಿಲ್ಲ. ಅದು ಇರುವ ಕಡೆ ನಾವು ಹುಡುಕೋದಿಲ್ಲ ! ಆದರೆ ಒಂದಂತೂ ಸತ್ಯ. ನಮಗೆ ಏನು ಕೊಡಬೇಕೋ ಅದನ್ನು ಭಗವಂತ ಕೊಟ್ಟೇ ಕೊಡುತ್ತಾನೆ. ಬೇಡವೆಂದರೂ ಸಿಗುತ್ತೆ ! ಆದರೆ ಸಿಗುತ್ತೆ ಬಿಡು ಅಂತ ಸುಮ್ಮನೆ ಕೂರಬಾರದಷ್ಟೆ. ಪ್ರಯತ್ನವನ್ನಂತೂ ಮಾಡಲೇಬೇಕು. ಏನೇ ಆಗಲಿ ಸಿಗುವುದು ಸಾಧಕರಿಗೆ ಮಾತ್ರ. ‘ಪ್ರಯತ್ನಾ ಸಾಧಕಾಃ’ ಅಲ್ಲವೇ ? ನಮ್ಮ ಮನದ ದುರಾಸೆ , ಲೋಭಗಳನ್ನು ಬಿಟ್ಟು ಕರ್ಮವೆಸಗಿದರೆ ಸಿಗಬೇಕಾದದ್ದು ಸಿಕ್ಕೇ ಸಿಗುತ್ತದೆ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021