ಹೊಟ್ಟುತುಂಬಿದೆಯೆಂದು ಭತ್ತವನು ಬಿಸುಡುವರೆ?
ಸೊಟ್ಟಗಿಹುದೆಂದು ಸಿಹಿ ಕಬ್ಬನೆಸೆಯುವರೆ ?
ಗಟ್ಟಿ ಮುಳ್ಳಿಹುದೆಂದು ಹೂವ ಮುಡಿವುದ ಬಿಡರು
ಬಿಟ್ಟು ನೋವ್ಪಿಡಿ ಸುಖವ ಜಾಣಮೂರ್ಖ//
ಹೊಟ್ಟಿನಿಂದ ಸುತ್ತುವರಿಯಲ್ಪಟ್ಟಿದೆ ಅಂತ ಯಾರಾದ್ರೂ ಭತ್ತವನ್ನು ಬಿಸಾಡುವರೇನು ? ಅಂಕುಡೊಂಕಾಗಿದೆ ಅಂತ ಕಬ್ಬನ್ನು ಎಸೆಯುವರೇನು ? ಹೂವಿನ ಗಿಡದಲ್ಲಿ ಗಟ್ಟಿಯಾದ , ಚೂಪಾದ ಮುಳ್ಳಿದ್ದರೂ ಜಾಗರೂಕತೆಯಿಂದ ಕಿತ್ತು ಹೂಮುಡಿಯುವುದನ್ನು ಮಾತ್ರ ಬಿಡರು. ಅಂದರೆ ಇವುಗಳೆಲ್ಲದರ ಅಂತರಾರ್ಥ ಏನೆಂದರೆ ಯಾವುದು ನೋವೋ ಅದನ್ನು ಬಿಡಿ. ಯಾವುದು ಸಂತೋಷದಾಯಕವೋ ಅದನ್ನು ಹಿಡಿಯಿರಿ. ಕೆಟ್ಟದ್ದನ್ನು ಬಿಡಿ , ಒಳಿತನ್ನು ಹಿಡಿಯಿರಿ. ಬದುಕನ್ನು ಸಂತಸಮಯವಾಗಿಸಿ . ಬದುಕು ಸಂಕೇತಗಳ ಮೂಲಕ ಎಲ್ಲ ಪರಿಹಾರವನ್ನೂ ಹೇಳುತ್ತದೆ.ಆದರೆ ನಾವು ನಿಧಾನವಾಗಿ ಯೋಚಿಸೋ ವ್ಯವಧಾನ ಕಳೆದುಕೊಂಡಿದೀವಿ ಅಷ್ಟೆ. ಅಲ್ಲವೇ ಗೆಳೆಯರೇ ?!
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021