ಮರಳಿ ಸೀತೆಯ ಬನಕೆ ಕಳಿಸಿದುದು ತರವೇನು?
ಮರೆಯೊಳಗೆ ವಾಲಿ ವಧೆ ತರವೆ ಪೇಳು?
ತರತರದಿ ರಾಮನನು ಒರೆವೆಯೇತಕೆ ಮರುಳೆ?
ಒರೆ ನಿನ್ನ ಮನ ಮೊದಲು ಜಾಣಮೂರ್ಖ//
ಬಹುಶಃ ಶ್ರೇಷ್ಠವಾದ ಈ ಜ್ಞಾನಸಿರಿಯನ್ನು , ಚಿಂತಿಸುವ ಶಕ್ತಿಯನ್ನು ಭಗವಂತ ಮಾನವನಿಗೆ ಕೊಟ್ಟಿದ್ದೇ ತಪ್ಪಾಯಿತೇನೋ!! ಸೀತಾ ಮಾತೆಯನ್ನು ರಾವಣನಿಂದ ಮರಳಿ ತಂದಮೇಲೂ ತುಂಬು ಗರ್ಭಿಣಿಯನ್ನು ಮತ್ತೆ ಕಾಡಿಗೆ ಕಳಿಸಿದುದು ತರವೇನು ? ಮರೆಯಲ್ಲಿ ನಿಂತು ವಾಲಿಯ ವಧೆ ಮಾಡಿದುದು ಸರಿಯೇನು ? ಈ ರೀತಿಯೆಲ್ಲಾ ಶ್ರೀರಾಮನನ್ನು ವಿಮರ್ಶಿಸುವ ನಾವು ಮೂರ್ಖರಲ್ಲವೇ ? ಶ್ರೀರಾಮನನ್ನು ವಿಮರ್ಶಿಸುವ ದುಸ್ಸಾಹಸವೇ !? ನಮ್ಮ ಮನಸ್ಸನ್ನೇ ವಿಮರ್ಶಿಸಿಕೊಳ್ಳಲಾಗದ ನಾವು ಶ್ರೀರಾಮನನ್ನು ವಿಮರ್ಶಿಸುವುದು ಸರಿಯೇ ? ಆ ಧರ್ಮಸೂಕ್ಷ್ಮಗಳ ಎತ್ತರಕ್ಕೆ ಏರುವುದು ನಮ್ಮಿಂದ ಸಾಧ್ಯವೇನು ? ಸರಿಯಾಗಿ ತಿಳಿಯದೇ ವಿಮರ್ಶಿಸುವ ಇಂತಹಾ ದುಸ್ಸಾಹಸ ಬಿಟ್ಟು ಶ್ರೀರಾಮನ ಆ ಕೆಲಸಗಳ ಹಿಂದಿರುವ ಧರ್ಮಸೂಕ್ಷ್ಮವನ್ನು ಅರಿತು ಶರಣಾಗುವುದೇ ಒಳಿತು ! ಅಲ್ಲವೇ ಗೆಳೆಯರೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021