ಎಳೆವೆತ್ತಿಗೆತ್ತೆತ್ತಿ ಬರೆಯೊ ಈ ಬದುಕಲ್ಲಿ !
ಕಳ್ಳೆತ್ತು ಸೌಖ್ಯವೀ ಬಾಳ ಪಯಣದಲಿ!
ಕಳೆವುದೆಂತೀ ಭವದ ಬವಣೆಗಳ ಭಾರವನು !
ತಿಳಿಯದೈ ಒಳಿತ ಗೈ ಜಾಣಮೂರ್ಖ //
ಇದು ಕಲಿಗಾಲ ! ಈ ಎತ್ತು ಬಂಡಿಯನ್ನು ಎಳೆಯುತ್ತದೆ ಅಂತ ಗೊತ್ತಾದರೆ ಸಾಕು. ಎಲ್ಲ ಭಾರವೂ ಅದರ ಮೇಲೆಯೇ ! ಬರೆಗಳು ಕೂಡ. ಸಾಮಾನ್ಯ ಬರೆಗಳಲ್ಲ ಅವು. ನಮ್ಮಂತೆಯೇ ಇದ್ದು , ನಮಗೇ ಎಳೆಯುವ ಮರೆಯಲಾಗದ ಬರೆಗಳು ! ಈ ಕಲಿಗಾಲದಲ್ಲಿ ಕಳ್ಳೆತ್ತುಗಳು ಹೇಗೋ ಚನ್ನಾಗೇ ಬದುಕುತ್ತವೆ. ಆ ಕಳ್ಳೆತ್ತುಗಳಿಗೇ ಒಳ್ಳೆ ಬೆಲೆ ಕೂಡ ! ದುಡಿವ ಎತ್ತುಗಳಿಗೆ ಬವಣೆಗಳ ಭಾರ ! ಇದರ ಒಳ ಮರ್ಮವೇ ಅರ್ಥವಾಗದು. ಓ ಗೆಳೆಯರೇ , ಇದನ್ನೇ ಕಲಿಗಾಲ ಅನ್ನೋದು. ಇದೆಂತಹಾ ವಿಚಿತ್ರ ! ತಂದೆ ತಾಯಿಗಳು ಮಕ್ಕಳನ್ನು ನಂಬುತ್ತಿಲ್ಲ ! ಬಂಧನಗಳು ಬಾಂಧವ್ಯಗಳು ನಶಿಸುತ್ತಿವೆ ! ನಮ್ಮೆಣಿಕೆಗೆ ಸಿಗದ ಏನೇನೋ ನಡೆಯುತ್ತಿದೆ ! ಚಣಕೊಂದು ಗಳಿಗೆಗೊಂದು ತೀರ್ಮಾನಗಳು ! ಒಂದೇ ಎರಡೇ ! ಆದ್ದರಿಂದ ಒಳ್ಳೆಯ ಧಾರ್ಮಿಕ ಭಾವನೆಗಳನ್ನು ಹೊಂದಿ ಬದುಕಬೇಕಾದುದು ಇಂದಿನ ಅನಿವಾರ್ಯ ! ಇಲ್ಲದಿದ್ದರೆ ಸಂಪೂರ್ಣ ಜಗತ್ತು ಅಪನಂಬಿಕೆಯ ಕರಾಳ ಕತ್ತಲಲ್ಲಿ ಮುಚ್ಚಿ ಹೋದೀತು ! ಅಲ್ಲವೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021