ಭುವಿಯ ಭವಿ ತಾನೆ ತನಗಧಿಕಾರವಿಲ್ಲಿ ! ಅನು
ಭವಿಪ ಹಕ್ಕೆನದೆಂಬ ಅಂಧಕಾರದೊಳು
ಭುವಿಯೊಳಗೆ ಕಾದಿದರೊಂಟಿ ಬಿಟ್ಟರೊ ತಾಯ
ಭುವಿಯೊಳಗೆ ಒರಗಿಹರೊ ಜಾಣಮೂರ್ಖ //
ಈ ಭೂಮಿಯ ಮೇಲೆ ತಾನೆ ಎಲ್ಲ! ತನ್ನದೇ ಅಧಿಕಾರ ಅಂತೆಯೇ ಇಲ್ಲಿನ ವೈಭವದ ಬದುಕಿಗೆ ತಾನೊಬ್ಬನೇ ಬಾಧ್ಯಸ್ಥನೆಂಬಂತೆ ವರ್ತಿಸಿ ಅಂಧಕಾರದಿಂದ ಭೂಮಿಗಾಗಿ ಹೋರಾಡಿದವರು ! ಹೇಮಾಹೇಮಿಗಳು , ಸಾಮ್ರಾಟರು ಚಕ್ರವರ್ತಿಗಳಾದಿಯಾಗಿ ಎಲ್ಲರೂ ಈ ತಾಯಿಯನ್ನು ಒಂಟಿಯಾಗಿ ಬಿಟ್ಟು , ಭೂಮಿಯ ಆಳದಲ್ಲಿ ಒರಗಿದರು ! ಎಂತಹಾ ವಿಪರ್ಯಾಸವಲ್ಲವೇ ? ನಾಲ್ಕು ದಿನದ ಈ ಬಾಳಿನಲ್ಲಿ ಎಂತಹಾ ಮಾಯೆ ! ನಾವು ಶಾಶ್ವತರೇನು ? ಏಕಿಂತಹಾ ಹೋರಾಟ ! ವಿಚಿತ್ರವೆನಿಸುವುದಿಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021