ಮನವ ಮಂದರ ಮಾಡಿ ತನುವ ವಾಸುಕಿ ಮಾಡಿ
ಘನತರದೊಳಾತ್ಮನನು ಮಂಥನವ ಮಾಡೆ!
ಜನಿಸಲೇನಮೃತದೊಡೆ ವಿಷವು ತಾ ಸಾಜದಿಂ
ತನುಮನದೊಳಮೃತ ಪಿಡಿ ಜಾಣಮೂರ್ಖ//
ಇದೊಂದು ಸುಂದರ ಕಲ್ಪನೆಯಾದರೂ ಸತ್ಯ. ಕೆಲವರು ಪುರಾಣದಲ್ಲಿನ ಸಮುದ್ರ ಮಂಥನವನ್ನು ಇದೊಂದು ಅಸಂಭಾವ್ಯ ಅಂಶ , ಕಲ್ಪನೆಯಷ್ಟೇ ಅಂತ ಏನಾದರೂ ಹೇಳಲಿ. ಆದರೆ ಆ ಘಟನೆಯ ಚಿಂತನೆಯೇ ಮನಸ್ಸಿಗೆ ಸಂತೋಷವನ್ನು ಕೊಡುತ್ತದೆ.ಅಲ್ಲವೇ !? ಈಗ ನಾವು ನಮ್ಮ ಮನಸ್ಸನ್ನೇ ಮಂದರ ಪರ್ವತವನ್ನಾಗಿಸೋಣ ! ಈ ಶರೀರವನ್ನು ವಾಸುಕಿಯನ್ನಾಗಿಸೋಣ ಮತ್ತೆ ಆತ್ಮವೆಂಬ ಮಹಾ ಸಾಗರದ ಮಂಥನ ಮಾಡೋಣ. ಸಮುದ್ರಮಂಥನದಲ್ಲಿ ಹುಟ್ಟಿದಂತೆ ಅಮೃತವೂ(ಒಳ್ಳೆಯದೂ) ವಿಷವೂ (ಕೆಟ್ಟದ್ದೂ) ಸಹಜವಾಗೇ ಹುಟ್ಟುತ್ತವೆ. ಆದರೆ ಚಿಂತನಾ ಶಕ್ತಿಯುಳ್ಳ ನಾವು ಒಳಿತೆಂಬ ಅಮೃತವನ್ನು ಪಿಡಿದು ಧನ್ಯರಾಗಬೇಕು. ಅಜ್ಞಾನದಿಂದ ಸ್ವೀಕರಿಸಬಾರದ್ದನ್ನು ಸ್ವೀಕರಿಸಿ ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗುತ್ತದೆ ಅಷ್ಟೆ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021