ಕಣ್ಣು ಕಂಡಿಹುದೇನು ಹಿಂದಿರುವ ಬೆನ್ನ ತಾ
ಹುಣ್ಣಾಗೆ ಬೆನ್ನೊಳಗೆ ಕಣ್ಣಿನೊಳು ನೀರೊ !
ಕಣ್ಣಳತೆ ಮೀರಲೇನ್ ತಾಯ್ತಂದೆಗಳಿಗೆ ಮಗ
ಕಣ್ಣೀರ ಕರೆವರೈ ಜಾಣಮೂರ್ಖ //
ನಮ್ಮ ತಾಯ್ತಂದೆಗಳೇ ನಮ್ಮ ಬದುಕಲ್ಲಿ ನಿಜವಾದ ದೇವರುಗಳು. ಈ ಸತ್ಯವನ್ನು ನಾವು ಮರೆಯಬಾರದು. ಕಣ್ಣು ಬೆನ್ನನ್ನು ಕಾಣದು. ಆದರೆ ಬೆನ್ನೊಳಗೆ ಒಂದು ಸಣ್ಣ ಹುಣ್ಣಾದರೂ , ಅಥವಾ ಪೆಟ್ಟಾದರೂ ನೀರು ಬರುವುದು ಮಾತ್ರ ಕಣ್ಣಲ್ಲೇ ! ಅಲ್ಲವೇ ? ಹಾಗೆಯೇ ತಮ್ಮ ಪ್ರೀತಿಯ ಮಗ ತಮ್ಮ ಕಣ್ಣಳತೆಯಿಂದ ಸ್ವಲ್ಪ ದೂರವಾದರೂ ಸಹ ತಂದೆ ತಾಯಿಗಳ ಹೃದಯ ಅಯ್ಯೋ ! ಕಾಣನಲ್ಲಾ ನನ್ನ ಮಗ , ಎಲ್ಲಿ ಹೋದ ಇವನು ಅಂತ ಚಡಪಡಿಸುತ್ತದೆ. ನಾವು ದೂರದಲ್ಲಿದ್ದರೂ, ಕಾಣದಿದ್ದರೂ ಕಣ್ಣೀರು ಮಿಡಿವ ಏಕಮಾತ್ರ ದೇವತಾ ಸ್ವರೂಪರೆಂದರೆ ತಂದೆ ತಾಯಿಗಳು. ಇದರಲ್ಲಿ ಸಂದೇಹವೇ ಬೇಡ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021