ಸಾಧನೆಯ ಗೈಯ್ಯಲೇನ್ ಸಂಸ್ಕಾರವಿಲ್ಲದಿರೆ ?
ಬೋಧನೆಯ ಸೋಗೇಕೆ ಹೃದಯವರಳದಿರೆ !
ಸಾಧಕಗೆ ಬೋಧನೆಯು ಭೂಷಣಮದಿಲ್ಲದಿರೆ
ಬೋಧೆ ಶವದಾಭರಣ ಜಾಣಮೂರ್ಖ //
ಸಂಸ್ಕಾರವಿಲ್ಲದ ಸಾಧನೆಯಿಂದೇನು ಪ್ರಯೋಜನ ? ಹೃದಯವರಳದೇ ಬೋಧಕನಂತೆ ಹೋದ ಮಾತ್ರಕ್ಕೆ ಅದು ಬೋಧನೆಯ ಸೋಗಷ್ಟೆ. ಬೋಧನೆಯ ಅಧಿಕಾರ ಸಾಧಕರಿಗೆ ಮಾತ್ರ. ಬೇರೆಲ್ಲವೂ ಬರೀ ಡಂಭ, ಅಹಂಕಾರ , ತೋರಿಕೆಯಷ್ಟೆ. ಅದು ಶವಕಿಕ್ಕಿದ ಆಭರಣದಂತೆ ವ್ಯರ್ಥವಷ್ಟೆ. ಅದೇನೋ ಅಂತಾರಲ್ಲ ಕತ್ತೆ ಬಲ್ಲದೆ ಹೇಳು ಕತ್ತುರಿಯ ಪರಿಮಳವ ! ಸತ್ತಶವವೇನರಿವುದಾಭರಣದಿರವ?
ಸುತ್ತಲೂ ಸತ್ತವರೆ ತುಂಬಿರಲು ಜಗದಲ್ಲಿ
ಸತ್ಯ ಶೋಧನೆಯೆಂತೊ ಜಾಣಮೂರ್ಖ// ಅಂದರೆ ಮದ,ಮತ್ಸರ, ಅಹಂಕಾರ,ಈರ್ಷೆಯಂತಹಾ ಶುಷ್ಕಗುಣಗಳಿರುವವನು , ಭಾವನೆಗಳಿರುವವನು ಸಾಧಕನೆಂತಾಗುತ್ತಾನೆ ? ಬೋದಕನೆಂತಾಗುತ್ತಾನೆ ? ಅದು ಕತ್ತೆಗೆ ಕಸ್ತೂರಿ ಕೊಟ್ಟಂತೆ ! ಸತ್ತ ಮೃತ ಶರೀರಕ್ಕೆ ಅಖಿಲಾಭರಣವಿಟ್ಟಂತೆ ಹೇಗೆ ಶೋಭಿಸುವುದಿಲ್ಲವೋ ಹಾಗೆ ಇಂತಹಾ ಡಾಂಭಿಕ ಸಾಧಕರಿಂದ ಸತ್ಯಶೋಧನೆಯೆಂತು !? ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021