ಸಂಸಾರ ಭಾರವಿಹು
ದೆನ್ನ ಮೇಲೆನ್ನುವಾ
ನುಡಿಯ ಬೆಡಗೇಕೆ ಬಿಡು
ಬಡಿವಾರವೇಕೆ ?
ನಿಸ್ವಾರ್ಥದೊಳು ನಿನ್ನ
ಭಾರ ಹೊತ್ತಿಹರಿಹರು !
ಬಸಿ ಬದುಕನವರಿಂಗೆ
ಜಾಣಮೂರ್ಖ//
ನಮ್ಮ ಜೀವನದಲ್ಲಿ ನಾವು ತುಂಬಾ ಭಾರವನ್ನೇನೋ ಹೊತ್ತಿರುತ್ತೇವೆ. ನಿಜ. ಆದರೆ ಅದನ್ನು ಮಾತಿನಲ್ಲಿ ಅಂದು ಆಡಿ ಮಾಡಬಾರದು. ಅದರಿಂದ ನಮ್ಮವರ ಮನಸ್ಸಿಗೆ ನೋವಾಗಬಾರದು ಅಲ್ಲವೇ? ಅತ್ಯಂತ ನಿಸ್ವಾರ್ಥದಲ್ಲಿ ನಮ್ಮ ಭಾರ ಹೊತ್ತಿರುವವರು ಬಹಳರಿದ್ದಾರೆ . ಇದೆಲ್ಲಾ ಒಂದು ಬಹು ದೊಡ್ಡ ಪ್ರೇಮ , ನಂಬಿಕೆ. ಇದಕ್ಕೆ ಧಕ್ಕೆಯಾಗಬಾರದು. ಹೊತ್ತು ಹೆತ್ತು ಸಾಕಿ ಸಲಹಿದ ತಾಯಿಯ ಋಣ ! ತಂದೆಯ ದೈವೀಕ ಪ್ರೀತಿ ! ಅಣ್ಣ ತಮ್ಮಂದಿರು ಕೊಡುವ ಬಲ ! ಅಕ್ಕ ತಂಗಿಯರ ಕಾಳಜಿ ! ಪತ್ನಿಯ ಪ್ರೇಮ ಮತ್ತು ಸೇವೆ ಅಂತೆಯೇ ಸಮಯಕ್ಕಾಗುವ ಸ್ನೇಹಿತರು ! ಇವರೆಲ್ಲರಲ್ಲೂ ಕುಂದುಗಳಿಲ್ಲವೆಂದಲ್ಲ ! ಇದ್ದರೂ ಅವು ನಗಣ್ಯ. ಅವುಗಳನ್ನು ಕಡೆಗಣಿಸಿಬಿಡೋಣ. ಜೀವನ ನಾಟಕದಲ್ಲಿ ಅವರ ಪಾತ್ರವನ್ನು ನಾವು ಮರೆಯುವಂತೆಯೇ ಇಲ್ಲ. ಈ ಬದುಕನ್ನು ಅವರಿಗಾಗಿಯೇ ಮೀಸಲಾಗಿಡೋಣ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021