ನೆಗಡಿ ಬಂದರೆ ಜುಗದಿ
ಮೂಗ ಕೊಯ್ವರೆ ಕೆಳೆಯ !
ನಗವಿಲ್ಲದಿರಲೇನು ?
ನಗುವ ತೊರೆವೇಕೆ ?
ಸಿಗದಿರಲು ಬೇಕಿಹುದು
ಮೊಗದಿ ಕಳವಳವೇಕೆ ?
ಸಿಗದೆಲ್ಲವಿಲ್ಲಿ ತಾಳ್
ಜಾಣಮೂರ್ಖ//
ಇಂದಿನ ಜನರ ಮನಸ್ಥಿತಿ ಹೇಗೆಂದರೆ ಅವರಿಗೆ ಯಾವ ತೊಂದರೆಯೂ ಆಗಬಾರದು. ಸುಖವಾಗಿರಬೇಕು. ತೊಂದರೆಯನ್ನೇ ಹಾಸಿ ಹೊದ್ದಿರುವವರಿಗೆ ಏನೆನ್ನಬೇಕು ? ನೆಗಡಿ ಬಂದರೆ ಜುಗ (ಜಿಗುಪ್ಸೆ) ಬಂದಂತಾಗಿ ಮೂಗನ್ನೇ ಕೊಯ್ಯುವರೇನು ? ದುಡ್ಡಿಲ್ಲದಿರಲೇನಂತೆ , ಮೊಗದಲ್ಲಿ ನಗುವನ್ನೇಕೆ ಕಳೆದುಕೊಳ್ಳಬೇಕು ? ಮುಖದಲ್ಲಿ ಮುಗುಳುನಗೆಯಿದ್ದರೆ ಆಗಬೇಕಾದ ಮುಕ್ಕಾಲು ಪಾಲು ಕೆಲಸ ಆದಂತೆಯೇ ! ನಮಗೆ ಬೇಕಾದದ್ದು ಸಿಗಲಿಲ್ಲ ಅಂತ ಕಳವಳಗೊಂಡು, ಉದ್ವೇಗಕ್ಕೆ ಒಳಗಾದರೆ ಬೇಕಾದದ್ದು ಸಿಕ್ಕಿಬಿಡುತ್ತದೆಯೇ !? ನಾವು ಒಂದು ವಿಷಯ ಗ್ರಹಿಸಬೇಕು. ಇಲ್ಲಿ ಮನಸ್ಸು ಬಯಸಿದುದೆಲ್ಲವೂ ಸಿಗುವುದಿಲ್ಲ. ಆದರೆ ತಾಳಬೇಕು. ತಾಳುವುದಷ್ಟೇ ಅಲ್ಲ. ಪ್ರಯತ್ನಶೀಲರಾಗಿ ದುಡಿದಾಗ ಸಿಗಬೇಕಾದುದು ಖಂಡಿತವಾಗಿ ಸಿಕ್ಕೇ ಸಿಗುತ್ತದೆ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021