ಕಾಸಿಗಾಗೇಸೇಸು
ಕಷ್ಟಕಾಣೀ ಬಾಳೊ
ಳೆಲ್ಲ ತವಸಿಗಳಿಲ್ಲಿ
ಬದುಕು ತಪಮಲ್ತೆ !
ಹಸಿವನೀಸಿದೊಡೇನು
ಈಸಿದಂತೇಂ ಬಾಳ ?
ಈಸು ಸಿಗುವನಕ ದಡ
ಜಾಣಮೂರ್ಖ //
ಹಣಕ್ಕಾಗಿ ಇಂದು ಜನ ಏನು ಬೇಕಾದರೂ ಮಾಡುತ್ತಾರೆ. ಅದೆಷ್ಟು ಕಷ್ಟ ಪಡುತ್ತಾರೆ !? ಬದುಕೊಂದು ತಪಸ್ಸು ! ಇಲ್ಲಿ ಒಂದೊಂದು ರೀತಿಯಲ್ಲಿ ಎಲ್ಲರೂ ತಪಸ್ವಿಗಳೆ ! ಆದರೆ ಹಣ ಗಳಿಕೆಯೇ ತಪಸ್ಸಾದರೆ ಎಂತು ? ಹಾಗಾದರೆ ಬೇರೆ ಏನೂ ಸ್ವಾರಸ್ಯವೇ ಇಲ್ಲವೇನು ಬದುಕಲ್ಲಿ ! ಗೆಳೆಯರೇ ಹಣವೊಂದು ವಸ್ತು ಅಷ್ಟೆ. ಬದುಕಲು ಅದು ಬೇಕು. ಆದರೆ ಅದೇ ಅಂತಿಮ ಗುರಿಯಾಗದಿರಲಯ್ಯ ! ಹಸಿವು , ಬಾಯಾರಿಕೆಗಳು ಎಲ್ಲರಿಗೂ ಇವೆ. ಅವುಗಳನ್ನು ಕಳೆದೊಡಾಯ್ತೇನು ? ಈಸಬೇಕು ಇದ್ದು ಜಯಿಸಬೇಕು. ಎಲ್ಲಿಯ ವರೆಗೆ ಈ ಪಾಡು !? ಎಂದರೆ ಗುರಿ ಮುಟ್ಟುವ ವರೆಗೆ , ದಡ ಸೇರುವ ವರೆಗೆ ! ಗುರಿ ಯಾವುದು !? ಎಲ್ಲಿಹುದು ದಡ !? ಎಂಬ ಪ್ರಶ್ನೆಗೆ ಉತ್ತರ ಬೇಕೆ ? ಹಾಗಿದ್ದರೆ ಶಾಂತವಾಗಿ ಕುಳಿತು ನಿನ್ನ ಮನದ ಸುಂದರ ಉದ್ಯಾನದಲ್ಲೊಮ್ಮೆ ವಿಹರಿಸಿ ಬಾರಯ್ಯ ಗೆಳೆಯ. ಉತ್ತರ ತಾನಾಗೇ ಸಿಗುತ್ತದೆ. ವಿಹರಿಸಿ , ಆ ಒಳದನಿಯನ್ನು ಕೇಳ್ವ ವ್ಯವಧಾನ ನಮಗೆ ಬೇಕಷ್ಟೆ. ಅಲ್ಲವೆ ಗೆಳೆಯರೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021